ಹುಬ್ಬಳ್ಳಿ: ಯುವಕರು, ಯುವತಿಯರು ವಯಸ್ಸು ಮೀರುವುದರೊಳಗೆ ಮದುವೆಯಾಗಬೇಕು (Marriage) ಎಂದು ಹಿರಿಯರು ಯಾವಾಗಲೂ ಹೇಳುತ್ತಾರೆ. ಆದರೆ ಇಲ್ಲೊಂದು ಇಳಿ ವಯಸ್ಸಿನ ಜೋಡಿ (Old Couple) ಮದುವೆಯಾಗಲು ವಯಸ್ಸು ಅಡ್ಡಿಯೇ ಆಗಲ್ಲ ಎಂಬುದನ್ನು ಸಾಬೀತುಪಡಿಸಿದೆ. ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್ ಡಿಕೆ ಚೌಹಾಣ್ ಹಾಗೂ ಅನಸೂಯಾ ನವಜೋಡಿಯಾಗಿ ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.ಹಸೆಮಣೆ ಹತ್ತಿರುವ 72 ವರ್ಷದ ಡಿಕೆ ಚೌಹಾಣ್ ಸತತ 3 ಬಾರಿ ಪಾಲಿಕೆ ಸದಸ್ಯರಾಗಿದ್ದರು. 2018ರಲ್ಲಿ ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಮೇಯರ್‌ಗೆ ಇದು 2ನೇ ಮದುವೆಯಾದರೆ, 62 ವಯಸ್ಸಿನ ಅನಸೂಯಾಗೆ ಇದು ಮೊದಲ ಮದುವೆ.ಡಿಕೆ ಚೌಹಾಣ್ ಮೊದಲ ಪತ್ನಿ ಶಾರದಾಬಾಯಿ, ಕಳೆದ 3 ತಿಂಗಳ ಹಿಂದೆ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದರು. ಹೆಂಡತಿಯ ನಿಧನದ ಬಳಿಕ ಡಿಕೆ ಚೌಹಾಣ್ ಮಾನಸಿಕವಾಗಿ ಬಹಳಷ್ಟು ಕುಗ್ಗಿದರು. ಹೀಗಾಗಿ ಅವರ ಮೂವರು ಮಕ್ಕಳು ಮತ್ತು ಆಪ್ತರು ಮತ್ತೊಂದು ಮದುವೆ ಆಗುವಂತೆ ಸಲಹೆ ನೀಡಿದ್ದರು. ಈ ಬಗ್ಗೆ ಯೋಚನೆ ಮಾಡಿದ ಚೌಹಾಣ್ ತನ್ನ ಹೆಂಡತಿಯ ಅಕ್ಕ ಅನಸೂಯ ಅವರನ್ನು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಈ ವಿಷಯ ಮನೆಯವರಿಗೂ ಹೇಳಿದ್ದಾರೆ. ಇದಕ್ಕೆ ಅವರ ಮಕ್ಕಳು, ಸೊಸೆಯಂದಿರು ಒಪ್ಪಿಗೆ ಕೊಟ್ಟಿದ್ದಾರೆ. ಇದನ್ನೂ ಓದಿ: ರೈತರ ಅಹೋರಾತ್ರಿ ಧರಣಿಗೆ ಸುಮಲತಾ ಅಂಬರೀಶ್ ಬೆಂಬಲಅನಸೂಯಾ ಅವರಿಗೆ 62 ವಯಸ್ಸಾಗಿದ್ದರು ಇನ್ನೂ ಮದುವೆ ಆಗಿರಲಿಲ್ಲ. ಚೌಹಾಣ್ ಅವರೊಂದಿಗೆ ಮದುವೆ ಪ್ರಸ್ತಾಪ ಬರುತ್ತಲೇ ಅವರು ತಿರಸ್ಕಾರ ಮಾಡಿದ್ದರು. ಆದರೆ ಸಮಾಜದ ಗುರು, ಹಿರಿಯರು ಸತತ ಪ್ರಯತ್ನ ಮಾಡಿ ಮದುವೆಗೆ ಕೊನೆಗೂ ಒಪ್ಪಿಸಿದ್ದಾರೆ. ಈ ಪರಿಣಾಮ ಹುಬ್ಬಳ್ಳಿ ಅರವಿಂದ ನಗರದ ಮನೆ ಮುಂದೆ ಡಿಕೆ ಚೌಹಾಣ್ ಮತ್ತು ಅನಸೂಯಾ ಮದುವೆ ಅದ್ದೂರಿಯಾಗಿ ನಡೆದಿದೆ.ಅರವಿಂದ ನಗರದಲ್ಲಿರುವ ಚೌಹಾಣ್ ಮನೆ ಮುಂದೆ ಅದ್ದೂರಿಯಾಗಿ ಪೆಂಡಾಲ್ ಹಾಕಿ ಶಾಸ್ತ್ರೋಕ್ತವಾಗಿ, ಸಮಾಜದ ಮತ್ತು ಕುಟುಂಬಸ್ಥರ ಸಾಕ್ಷಿಯಾಗಿ, ಯುವ ಜೋಡಿಗಳ ಮದುವೆ ಮೀರಿಸೋ ರೀತಿಯಲ್ಲಿ ಈ ಹಿರಿ ಜೋಡಿಗಳು ಮದುವೆಯಾಗಿದ್ದಾರೆ. ಈ ಹಿರಿ ಜೀವಗಳಿಗೆ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರೇ ಮುಂದೆ ನಿಂತು ಮದುವೆ ಕಾರ್ಯ ಮಾಡಿದ್ದು ಮತ್ತೊಂದು ವಿಶೇಷ. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಸೇವಕನಾಗಿರುತ್ತೇನೆ ಎಂದಿದ್ರು: ರಾಹುಲ್ ಗಾಂಧಿ
Sign in to your account
Username or Email Address


Password

 Remember Me


