ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೋಲಾರ (Kolar) ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾದರೆ ಮೊದಲು ದಲಿತ ಮುಖ್ಯಮಂತ್ರಿ (Dalit CM) ಘೋಷಣೆ ಮಾಡಿ, ಬಳಿಕ ಸ್ಪರ್ಧೆ ಮಾಡಲಿ ಎಂದು ಕೋಲಾರದಲ್ಲಿ ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ದಲಿತ್ ನಾರಾಯಣಸ್ವಾಮಿ ಒತ್ತಾಯ ಮಾಡಿದರು.ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದಾದರೆ ನಮ್ಮದು ಯಾವುದೇ ತಕರಾರಿಲ್ಲ. ಸ್ವತಂತ್ರ‍್ಯ ಪೂರ್ವದಿಂದಲೂ ದಲಿತರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಾ ಅವರ ಜೊತೆಗಿದ್ದಾರೆ. ಈ ಹಿಂದೆ ಕೂಡಾ ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಮೋಸ ಮಾಡಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಸೇರಿದಂತೆ ಹಿರಿಯ ಕಾಂಗ್ರೆಸ್ ದಲಿತ ನಾಯಕರನ್ನು ದಲಿತ ಸಿಎಂ ಘೋಷಣೆ ಮಾಡಲಿ ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಹೋರಾಟಗಾರರೊಂದಿಗೆ ಕೂತು ಪ್ರಚಾರ ಪಡೆದು ಹೋದ ಯು.ಟಿ ಖಾದರ್‌ಗೆ ಟೋಲ್ ಗೇಟ್ ತೆರವು ಮಾಡಲು ಸಾಧ್ಯವಾಯಿತೇ?: ಭರತ್ ಶೆಟ್ಟಿಕೋಲಾರದ ರಮೇಶ್ ಕುಮಾರ್ ಘಟಬಂಧನ್ ತಂಡವನ್ನು ನಂಬಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಿದರೆ ಅವರಿಗೆ ಮಹಾಘಟಬಂಧನ್ ಮೋಸ ಮಾಡಲಿದೆ ಎಂದು ಭವಿಷ್ಯ ನುಡಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸ್ಪರ್ಧೆ ಮಾಡಲಿ ಎಂದು ದಲಿತ ಮುಖಂಡರು ಒತ್ತಾಯಿಸಿದರು. ಇದನ್ನೂ ಓದಿ: ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್‌ ತುರ್ತು ಪರಿಸ್ಥಿತಿ ಹೇರಿತ್ತು – ಬಿಜೆಪಿ ತಿರುಗೇಟು
Sign in to your account
Username or Email Address


Password

 Remember Me


