`ಕಾಂತಾರ’ (Kantara Film) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ಸದ್ಯ ಮುಂಬೈಗೆ ಹಾರಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಮನೆ ಮುಂದೆ ಜಮಾಯಿಸಿದ ಜನಸಾಗರ ನೋಡಿ ರಿಷಬ್ ಅಚ್ಚರಿಪಟ್ಟಿದ್ದಾರೆ.ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಚಿತ್ರದ ಸಕ್ಸಸ್ ನಂತರ ಸಾಕಷ್ಟು ಕಡೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.`ಕಾಂತಾರ’ ಚಿತ್ರದ ರಿಲೀಸ್ ಬಳಿಕ ಮುಂಬೈನಲ್ಲಿ ಸಾಕಷ್ಟು ಕಡೆ ಸಂದರ್ಶನ ನೀಡಿದ್ದು, ಈ ವೇಳೆ ಶಾರುಖ್ ಮನೆ ಮುಂದೆ ಜನಸಾಗರ ನೋಡಿ ಅಚ್ಚರಿಪಟ್ಟಿದ್ದೆ ಎಂದಿದ್ದಾರೆ. ಇಲ್ಲಿ ಯಾಕೆ ಇಷ್ಟು ಜನ ಸೇರಿದ್ದಾರೆ ಎಂದು ಸಂದರ್ಶಕನನ್ನು ಈ ಬಗ್ಗೆ ಕೇಳಿದಾಗ, ಇದು ಶಾರುಖ್ ಅವರ ಮನ್ನತ್ ಬಂಗಲೆ ಎಂದು ಉತ್ತರಿಸಿದ್ದಾರೆ. ಬಾದಷಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ದಂಡೇ ಜಮಾಯಿಸಿತ್ತು.  ಶಾರುಖ್ ಅವರ ಅಭಿಮಾನಿಗಳ ಅಭಿಮಾನ ಕಂಡು ಅಚ್ಚರಿಪಟ್ಟಿದ್ದೆ ಎಂದು ರಿಷಬ್ ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


