ಬಿಗ್ ಬಾಸ್ ಮನೆಯಲ್ಲಿ(Bigg Boss Kannada) ಸದಾ ಯಾವಾಗಲೂ ಒಂದಲ್ಲಾ ಒಂದು ವಿಷ್ಯವಾಗಿ ಜಗಳ ಆಡುತ್ತಲೇ ಇರುತ್ತಾರೆ. ಇದೀಗ ಸದಾ ಕ್ವಾಟ್ಲೆ ಕೊಡೋ ರಾಜಣ್ಣಗೆ, ರೂಪೇಶ್ ಶೆಟ್ಟಿ ಕ್ವಾಟ್ಲೆ ಕೊಟ್ಟಿದ್ದಾರೆ. ದೊಡ್ಮನೆಯಲ್ಲಿ ರಾಜಣ್ಣ ಬ್ರೇಸ್ಲೆಟ್, ಉಂಗುರ ಕಳೆದುಕೊಂಡು ಪರದಾಡುತ್ತಿದ್ದಾರೆ. ಈ ಮೂಲಕ ರಾಜಣ್ಣನನ್ನು ರೂಪೇಶ್(Roopesh Shetty) ಆಟ ಆಡಿಸುತ್ತಿದ್ದಾರೆ.ಬಿಗ್ ಬಾಸ್ ಮನೆ(Bigg Boss) ಮಂದಿಗೆ ಗೊಂಬೆ ತಯಾರಿಸುವ ಟಾಸ್ಕ್ ಕೊಟ್ಟಿದ್ದರು. ಈ ವಿಷ್ಯವಾಗಿ ಮನೆಯಲ್ಲಿ ರಣರಂಗವೇ ಸೃಷ್ಟಿಯಾಗಿತ್ತು. ಈ ಟಾಸ್ಕ್ ಬಳಿಕ ರಾಜಣ್ಣ ಬ್ರೇಸ್ಲೆಟ್ ಮತ್ತು ಉಂಗುರ ಕಳೆದುಕೊಂಡಿರೋದು ಅವರ ಗಮನಕ್ಕೆ ಬಂದಿದೆ. ಬಳಿಕ ಬಿಗ್ ಬಾಸ್ ಬ್ರೇಸ್ಲೆಟ್ ಎಲ್ಲಿದೆ ಎಂದು ತಿಳಿಸಿಕೊಡಿ ಎಂದು ಕೇಳಿದ್ದಾರೆ. ಇತ್ತ ನನ್ನ ವಸ್ತುಗಳು ಹೋಯಿತು ಎಂದು ಚಿಂತೆ ಮಾಡ್ತಾ ಇದ್ದರೆ, ರೂಪೇಶ್ ಶೆಟ್ಟಿ ಆಟ ಆಡಿಸಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಕಳ್ಳತನ: ಬ್ರೇಸ್ಲೆಟ್,ಉಂಗುರ ಸಿಗದೇ ರೂಪೇಶ್ ರಾಜಣ್ಣ ಪರದಾಟಅಷ್ಟೇ ಅಲ್ಲ, ಸಿಕ್ಕಿದ್ದೆ ಚಾನ್ಸ್ ಅಂತಾ ರೂಪೇಶ್ ಶೆಟ್ಟಿ, ರಾಜಣ್ಣ ಕೈಯಲ್ಲಿ ಭಿಕ್ಷೆ ಬೇಡಿಸಿದ್ದಾರೆ. ಬಳಿಕ ಕ್ಯಾಮೆರಾ ಮುಂದೆ ರೂಪೇಶ್ ಶೆಟ್ಟಿ ನಾನೇ ಬ್ರೇಸ್ಲೆಟ್ ಮತ್ತು ಉಂಗುರ ತೆಗೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆಮೇಲೆ ರಾಜಣ್ಣಗೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.ಕಳೆದ ಬಾರಿ ಸಾನ್ಯ ಕೂಡ ರಾಜಣ್ಣಗೆ ಬಕ್ರಾ ಮಾಡಿದ್ದರು. ಈಗ ರೂಪೇಶ್ ಶೆಟ್ಟಿ ಸರದಿ, ಒಟ್ನಲ್ಲಿ ರಾಜಣ್ಣ ಪೇಚಾಟ ನೋಡಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.
Sign in to your account
Username or Email Address


Password

 Remember Me


