ಕನ್ನಡತಿ ರಶ್ಮಿಕಾ ಮಂದಣ್ಣಗೆ(Rashmika Mandanna) ಅದ್ಯಾಕೋ ಇತ್ತೀಚೆಗೆ ಲಕ್ ಕೈಕೊಟ್ಟಂತಿದೆ. `ಗುಡ್ ಬೈ’ (Good Bye) ಚಿತ್ರದ ಸೋಲಿನ ನಂತರ ಮತ್ತೆ ಬಾಲಿವುಡ್‌ನಲ್ಲಿ ಮತ್ತೊಂದು ಹಿನ್ನೆಡೆಯಾಗಿದೆ. `ಕಾಂತಾರ’ ಮುಂದೆ ನೆಲೆಕಚ್ಚಿದ ʻಗುಡ್ ಬೈʼ ಚಿತ್ರದ ಕಲೆಕ್ಷನ್ ನೋಡಿ, ರಶ್ಮಿಕಾ ನಟನೆಯ ಮುಂದಿನ `ಮಿಷನ್ ಮಜ್ನು'(Mission Majnu) ಚಿತ್ರವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.ಬಾಲಿವುಡ್ (Bollywood) ಸಿನಿಮಾಗಳಿಗೆ ಅದ್ಯಾಕೋ ಅದೃಷ್ಟ ಕೈಕೊಟ್ಟಿದೆ. ಬಾಲಿವುಡ್ ನೆಲದಲ್ಲಿ ಹಿಂದಿ ಸಿನಿಮಾಗಳಿಗೆ ನೆಲೆ ಇಲ್ಲದಂತೆಯಾಗಿದೆ. ಇತ್ತೀಚೆಗೆ ಕೆಜಿಎಫ್‌ 2, ಕಾಂತಾರ ಕಮಾಲ್‌ ಮಾಡಿತ್ತು.  ಹಿಂದಿ ಸಿನಿಮಾಗಳ ಕಲೆಕ್ಷನ್ ಗಮನಿಸಿ `ಮಿಷನ್ ಮಜ್ನು’ ನಿರ್ಮಾಪಕ ಮಹತ್ತರ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೀಚೆಗೆ ರಶ್ಮಿಕಾ ನಟನೆಯ ʻಗುಡ್‌ಬೈʼ ಮತ್ತು ಸಿದ್ಧಾರ್ಥ್ ನಟನೆಯ ʻಥ್ಯಾಂಕ್ ಗಾಢ್ʼ ಎರಡು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದೆ. ಹೀಗಿರುವಾಗ ಈ ಜೋಡಿಯ ಬಹುನಿರೀಕ್ಷಿತ ಚಿತ್ರ ʻಮಿಷನ್ ಮಜ್ನುʼ ಸಿನಿಮಾವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲು ಯೋಚಿಸಿದ್ದಾರೆ. ʻಕಾಂತಾರʼ ರಿಲೀಸ್‌ ಆಗಿ 50ನೇ ದಿನದತ್ತ ಮುನ್ನುಗ್ಗುತ್ತಿದ್ದರು, ಚಿತ್ರದ ಕಲೆಕ್ಷನ್‌ನಲ್ಲಿ ತಗ್ಗುವ ಲಕ್ಷಣ ಕಾಣುತ್ತಿಲ್ಲ.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಶ್ಮಿಕಾ ನಟನೆಯ ಮಿಷನ್ ಮಜ್ನು ಸಿನಿಮಾ ಜೂನ್ 2022ರಲ್ಲಿಯೇ ರಿಲೀಸ್ ಆಗಬೇಕಿತ್ತು. ಕೆಲ ಕಾರಣಗಳಿಂದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹಾಕಲಾಗಿತ್ತು. ಇತ್ತೀಚಿನ ಹಿಂದಿ ಸಿನಿಮಾಗಳ ಕಲೆಕ್ಷನ್ ನೋಡಿ, ʻಮಿಷನ್ ಮಜ್ನುʼ ಚಿತ್ರವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲಿದ್ದಾರೆ. ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್  A post shared by Rashmika Mandanna (@rashmika_mandanna)2023ರಂದು ಜನವರಿ 18ರಂದು ಓಟಿಟಿಯಲ್ಲಿ ಈ ಸಿನಿಮಾವನ್ನ ನೋಡಬಹುದಾಗಿದೆ. ಸಿದ್ಧಾರ್ಥ್ ಮತ್ತು ರಶ್ಮಿಕಾ ಜೋಡಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


