ಬೆಂಗಳೂರು/ನೆಲಮಂಗಲ: ಜೊತೆಯಲ್ಲಿಯೇ ಪಾರ್ಟಿ ಮಾಡಿ ಯುವಕನೋರ್ವನನ್ನು ಸ್ನೇಹಿತರೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಉತ್ತರ ತಾಲೂಕಿನ ಮಾಗಡಿ (Magadi) ರಸ್ತೆಯ ಮಾಚೋಹಳ್ಳಿಯಲ್ಲಿ (Machohalli) ನಡೆದಿದೆ.ಮೃತ ದುರ್ದೈವಿಯನ್ನು ತಮಿಳುನಾಡು (Tamilnadu) ಮೂಲದ ನಟರಾಜು (35) ಎಂದು ಗುರುತಿಸಲಾಗಿದೆ. ಮಹದೇವ್ ಎಂಬವರ ಬಿಲ್ಡಿಂಗ್ ಮೇಲೆ ನಟರಾಜು ಹತ್ಯೆಗೈಯಲಾಗಿದೆ. ಮೃತ ನಟರಾಜು ಇತ್ತೀಚಿಗೆ ಅಷ್ಟೇ ತಮಿಳುನಾಡಿನಿಂದ ಬೆಂಗಳೂರಿಗೆ ಉದ್ಯೋಗ ಹರಸಿ ಬಂದಿದ್ದರು ಎನ್ನಲಾಗುತ್ತಿದೆ. ಲಾರಿ ಪಾರ್ಕಿಂಗ್‍ನಲ್ಲಿ ಕ್ಯಾರಿಯರ್ ಕೆಲಸ ಮಾಡಿಕೊಂಡಿದ್ದು ರಾತ್ರಿ ಸ್ನೇಹಿತರೊಂದಿಗೆ ನಟರಾಜು ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆಮೃತದೇಹವನ್ನು ಕಂಡ ಜನ ಮಾದನಾಯಕನಹಳ್ಳಿ (Madanayakanahalli) ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಕೂಡಲೇ ನೆಲಮಂಗಲ ಉಪವಿಭಾಗ ಡಿವೈಎಸ್‍ಪಿ. ಕೆ.ಸಿ.ಗೌತಮ್ ಹಾಗೂ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಟಿಕೆಟ್‍ಗಾಗಿ ಕಾಂಗ್ರೆಸ್‍ನಲ್ಲಿ ಬಣ ಬಡಿದಾಟ – ಪ್ರಮುಖ ಕ್ಷೇತ್ರಗಳಿಗೆ ಸಿದ್ದು, ಡಿಕೆ ಬೆಂಬಲಿಗರ ಅರ್ಜಿ
Sign in to your account
Username or Email Address


Password

 Remember Me


