ತೆಲುಗಿನ ಲೆಜೆಂಡರಿ ನಂದಮೂರಿ ಬಾಲಕೃಷ್ಣ(Nandamuri Balakrishna) `ಅಖಂಡ’ ಸಕ್ಸಸ್ ನಂತರ `ವೀರ ಸಿಂಹ ರೆಡ್ಡಿ'(Veera Simha Reddy) ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಬಾಲಯ್ಯ ಅವರ ಮುಂದೆ ಘರ್ಜಿಸಲು ಘಟಾನುಘಟಿಗಳನ್ನೇ ಕರೆಸಲಾಗುತ್ತಿದೆ. ದುನಿಯಾ ವಿಜಯ್ (Duniya Vijay) ಆನ್‌ಬೋರ್ಡ್ ಆಗಿರುವ ಬೆನ್ನಲ್ಲೇ ಈಗ `ಕೆಜಿಎಫ್ 2′ (Kgf 2) ನಟ ಕೂಡ ಈ ತಂಡಕ್ಕೆ ಸೇರಿಕೊಂಡಿದ್ದಾರೆ.`ಅಖಂಡ'(Akanda Film) ಚಿತ್ರದ ಸಕ್ಸಸ್ ನಂತರ ತಮ್ಮ 107ನೇ ಸಿನಿಮಾ `ವೀರ ಸಿಂಹ ರೆಡ್ಡಿ’ಗೆ ಬಾಲಯ್ಯ ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಸಖತ್ತಾಗಿ ಶೂಟಿಂಗ್ ಕೂಡ ನಡೆಯುತ್ತಿದೆ. ಶ್ರುತಿ ಹಾಸನ್(Shruti Haasan) ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ಬಾಲಯ್ಯಗೆ ಖಡಕ್ ವಿಲನ್ ಆಗಿ ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್ ಎಂಟ್ರಿ ಕೊಟ್ಟ ಬೆನ್ನಲ್ಲೇ `ಕೆಜಿಎಫ್ 2′ ನಟ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.  A post shared by B.s. Avinash (@avinashbs)`ಕೆಜಿಎಫ್ 2′ ಸಿನಿಮಾದಲ್ಲಿ ಖಳನಾಯಕ ಆಂಡ್ರೂಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವಿನಾಶ್ ಈಗ ಬಾಲಯ್ಯ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗಂಗಿ ರೆಡ್ಡಿ ಎಂಬ ವಿಲನ್ ಪಾತ್ರದಲ್ಲಿ ಟಾಲಿವುಡ್ ಲೆಜೆಂಡ್‌ಗೆ ಕಿಕ್ ಕೊಡಲಿದ್ದಾರೆ. ಇದೀಗ ನಿರ್ದೇಶಕ ಗೋಪಿ ಚಂದ್ ಮಲಿನೇನಿ ಜೊತೆಗಿರುವ ಅವಿನಾಶ್ ಫೋಟೋ ಕೂಡ ವೈರಲ್ ಆಗುತ್ತಿದೆ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್  A post shared by B.s. Avinash (@avinashbs)ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಜತೆ ಶ್ರುತಿ ಹಾಸನ್, ದುನಿಯಾ ವಿಜಯ್, ವರಲಕ್ಷ್ಮಿ ಶರತ್‌ಕುಮಾರ್, ಅವಿನಾಶ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿ ಇರಲಿದೆ.
Sign in to your account
Username or Email Address


Password

 Remember Me


