ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿ, ನಟಿಸಿರುವ `ಕಾಂತಾರ'(Kantara Film) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. `ಕಾಂತಾರ’ ಕನ್ನಡದಲ್ಲಿ ಕಮಾಲ್ ಮಾಡಿದ ಬೆನ್ನಲ್ಲೇ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಕಂಡಿತ್ತು. ಇದೀಗ ತುಳು ಭಾಷೆಯಲ್ಲೂ ಡಬ್ ಆಗಲಿದೆ. ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ `ಕಾಂತಾರ’ ಸೂಪರ್ ಸಕ್ಸಸ್ ಖುಷಿಯಲ್ಲಿದ್ದಾರೆ. ಕನ್ನಡದ `ಕಾಂತಾರ'(Kantara Film) ಕಂಪು ಪಸರಿಸಿದ ಮೇಲೆ ಬಹುಭಾಷೆಯಲ್ಲಿ ಡಬ್ ಆಗಿ ರಿಲೀಸ್ ಬಳಿಕ ಗಲ್ಲಾಪೆಟ್ಟಿಗೆ ಕೋಟಿಗಟ್ಟಲ್ಲೇ ಕಲೆಕ್ಷನ್ ಮಾಡಿತ್ತು. ದೈವದ ಕಥೆಯಾಗಿರುವ `ಕಾಂತಾರ’ ತುಳುವಿನಲ್ಲಿಯೂ ತೆರೆ ಕಾಣುತ್ತಿದೆ. ಇದನ್ನೂ ಓದಿ:ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಹೊಂಬಾಳೆ ಬ್ಯಾನರ್‌ನ `ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ಕೂಡ ಡಬ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಪ್ರಕ್ರಿಯೆ ಕೂಡ ಶುರುವಾಗಿದೆ. ಸೆನ್ಸಾರ್ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ `ಕಾಂತಾರ’ ತುಳುವಿನಲ್ಲಿ ತೆರೆ ಕಾಣಲಿದೆ.ಇನ್ನೂ `ಕಾಂತಾರ’ ದೇಶದ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ವರ್ಲ್ಡ್ ವೈಡ್ ಕಲೆಕ್ಷನ್ 367 ಕೋಟಿ ರೂ. ಕಲೆಕ್ಷನ್ ಮಾಡಿ 400 ಕೋಟಿ ರೂ. ಕಲೆಕ್ಷನ್ ಮಾಡುತ್ತ ರಿಷಬ್ ಶೆಟ್ಟಿ ಸಿನಿಮಾ ಮುನ್ನುಗ್ಗುತ್ತಿದೆ.
Sign in to your account
Username or Email Address


Password

 Remember Me


