ಸ್ಯಾಂಡಲ್‌ವುಡ್‌ನ (Sandalwood) `ಜಾಗ್ವಾರ್’ ಹೀರೋ ನಿಖಿಲ್ ಕುಮಾರಸ್ವಾಮಿ, ಮಕ್ಕಳ ದಿನಾಚರಣೆಯಂದು ಮಗನ ಮುದ್ದಾದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗನ ಜೊತೆ ನಿಖಿಲ್(Nikhil Kumarswamy) ದಂಪತಿ ಕೂಡ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿರುವುದು ನೆಟ್ಟಿಗರ ಗಮನ ಸೆಳೆಯುತ್ತಿದೆ.  A post shared by Nikhil Kumaraswamy (@nikhilgowda_jaguar)ಜಾಗ್ವಾರ್, ಸೀತಾರಾಮ ಕಲ್ಯಾಣ, ರೈಡರ್, ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯ(Politics) ರಂಗದಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ನಿಖಿಲ್ ಅವರ ಮುದ್ದು ಮಗನ ನಾಮಕರಣವಾಗಿತ್ತು. ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದರು. ಈಗ ಮಕ್ಕಳ ದಿನಾಚರಣೆ ಪ್ರಯುಕ್ತ ಮಗನ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಮಗ ಅವ್ಯಾನ್ ದೇವ್ ಜೊತೆ ನಿಖಿಲ್ ದಂಪತಿ ಕೂಡ ಮಿಂಚಿದ್ದಾರೆ.  A post shared by Nikhil Kumaraswamy (@nikhilgowda_jaguar)ಬಿಳಿ ಬಣ್ಣದ ಶರ್ಟ್ ಜೊತೆ ಡೆನಿಮ್‌ನಲ್ಲಿ ನಿಖಿಲ್ ಮತ್ತು ರೇವತಿ ಪುತ್ರ ಕಂಗೊಳಿಸಿದ್ದಾರೆ. ಇದೀಗ ಈ ಫೋಟೋಶೂಟ್ ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿದೆ.Live Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


