ಬೆಂಗಳೂರು: ರಾಜ್ಯ ಸರ್ಕಾರ 11 ಮಂದಿ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಏಳು ಅಧಿಕಾರಿಗಳು ವರ್ಗಾವಣೆಯಾದರೆ, 4 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.ಎಂ.ಎ ಸಲೀಂ ಅವರನ್ನು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್ ಟ್ರಾಫಿಕ್ ಕಮಿಷನರ್ ನೇಮಕ ಮಾಡುವ ಮೂಲಕ ನೂತನ ಹುದ್ದೆಯನ್ನು ಸೃಷ್ಟಿಸಲಾಗಿದೆ. ಜೊತೆಗೆ ಟ್ರಾಫಿಕ್ ಕಮೀಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿ ನೇಮಿಸಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.ರಮೇಶ್ ಬಾನೋತ್ ಅವರನ್ನು ಮೈಸೂರು ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಸಿಐಡಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಸಿಐಡಿ ಎಸ್‍ಪಿಯಾಗಿದ್ದ ರವಿ.ಡಿ ಚನ್ನಣ್ಣನವರ್ (Ravi D channannavar) ಅವರನ್ನು ಕಿಯೋನಿಕ್ಸ್ ಎಂಡಿಯಾಗಿ, ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿದ್ದ ದಿವ್ಯಜ್ಯೋತಿ ರೇ ಅವರನ್ನು ಐಜಿಪಿಯಾಗಿ ಕುಂದುಕೊರತೆಗಳು ಮತ್ತು ಮಾನಹ ಹಕ್ಕುಗಳ ಇಲಾಖೆಗೆ ಮತ್ತು ರವಿಕಾಂತೇಗೌಡ (Ravikanthe Gowda) ಅವರನ್ನು ಸಿಐಡಿ ವಿಭಾಗದ ಡಿಐಜಿಯಾಗಿ ವರ್ಗಾವಣೆಗೊಳಿಸಲಾಗಿದೆ.ರಮಣ್ ಗುಪ್ತ ಸಿಐಡಿ ಜಂಟಿ ಪೊಲೀಸ್ ಆಯುಕ್ತ, ಶರಣಪ್ಪ ಎಸ್.ಡಿ ಬೆಂಗಳೂರು ಸಿಸಿಬಿ ಕಮಿಷನರ್, ಚಂದ್ರಗುಪ್ತ ಡಿಐಜಿ ಮಂಗಳೂರು ಪಶ್ಚಿಮ ವಲಯ, ಎಂ.ಎನ್ ಅನುಚೇತ್ ಜಾಯಿಂಟ್ ಕಮಿಷನರ್ ಟ್ರಾಫಿಕ್ ಬೆಂಗಳೂರು ನಗರ, ದಿವ್ಯಜ್ಯೋತಿ ರೇ ಐಜಿಪಿ ಕುಂದುಕೊರತೆಗಳು ಮತ್ತು ಮಾನಹ ಹಕ್ಕುಗಳ ಇಲಾಖೆ, ಲೋಕೇಶ್ ಕುಮಾರ್ ಡಿಐಜಿ ಬಳ್ಳಾರಿ ರೇಂಜ್‍ಗೆ ವರ್ಗಾವಣೆ ಮಾಡಲಾಗಿದೆ.Live Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


