ಧಾರವಾಡ: ಮನರಂಜನೆಗಾಗಿ ಟಗರಿನ ಕಾಳಗ, ಚಕ್ಕಡಿ ಓಡಿಸುವ ಸ್ಪರ್ಧೆ, ಹೀಗೆ ಅನೇಕ ಸ್ಪರ್ಧೆಗಳನ್ನು ಅಲ್ಲಲ್ಲಿ ಆಯೋಜನೆ ಮಾಡುವುದು ಹಳ್ಳಿಗಳಲ್ಲಿ ಸಹಜ. ಇದೀಗ ಧಾರವಾಡದಲ್ಲಿ (Dharwada) ವಿಭಿನ್ನವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿದೆ.ಧಾರವಾಡ ಎಮ್ಮೆ (Buffalo) ಬಹಳ ಫೇಮಸ್. ಧಾರವಾಡ ಗೌಳಿಗಲ್ಲಿಯಲ್ಲಿ ಎಮ್ಮೆ ಸಾಕುವವರು ದೀಪಾವಳಿ ಹಬ್ಬದ ನಂತರ ಎಮ್ಮೆ ಓಟದ (Running Race) ಸ್ಪರ್ಧೆ ಆಯೋಜನೆ ಮಾಡ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅವರು ಧಾರವಾಡ ಹೊರವಲಯದ ಹನುಮಂತನಗರದ ಹತ್ತಿರ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಅನೇಕರು ತಮ್ಮ ಎಮ್ಮೆಗಳ ಸಮೇತ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ಎಮ್ಮೆಗಳ ಮಾಲೀಕರು ಬೈಕ್ ತೆಗೆದುಕೊಂಡು ಮುಂದೆ ಹೋಗಿ ತಮ್ಮ ಎಮ್ಮೆ ಬೆನ್ನಟ್ಟಿಸಿಕೊಂಡು ಬರುವ ಮೂಲಕ ಸ್ಪರ್ಧೆಯ ಕಾವು ಹೆಚ್ಚಿತು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 20 ಸಾವಿರ, ದ್ವಿತೀಯ ಸ್ಥಾನ 15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 12,500 ರೂಪಾಯಿ ಬಹುಮಾನ ನೀಡಲಾಯಿತು. ಅಲ್ಲದೇ ಸಮಾಧನಾಕರ ಬಹುಮಾನವಾಗಿ ಸ್ಟೀಲ್ ಪಾತ್ರೆ, ಬಕೆಟ್ ಸೇರಿ ಹಲವು ವಸ್ತುಗಳನ್ನು ನೀಡಲಾಯಿತು. ಇದರಲ್ಲಿ ಧಾರವಾಡದ ಎಮ್ಮೆ ಅಷ್ಟೇ ಅಲ್ಲ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎಮ್ಮೆ ಕೂಡಾ ಭಾಗವಹಿಸಿದ್ದವು. ಮುಂದೆ ಬೈಕ್ ಹೋಗುತ್ತಿದ್ದರೆ ಎಮ್ಮೆ ಹಿಂಬದಿಯಿಂದ ಓಡುವ ಮೂಲಕ ಕೇವಲ ಒಂದು ನಿಮಿಷದಲ್ಲಿ ನೂರು ಮೀಟರ್ ಓಡಬೇಕಾಯಿತು. ಅದರಲ್ಲಿ ಯಾವ ಎಮ್ಮೆ ಕಡಿಮೆ ಸಮಯದಲ್ಲಿ ಓಡುತ್ತೆ, ಅದಕ್ಕೆ ಬಹುಮಾನ ಕೊಡಲಾಯಿತು. ಇದನ್ನೂ ಓದಿ: ಹೆರಿಗೆಗೆಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ
Sign in to your account
Username or Email Address


Password

 Remember Me


