ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ(Nandini) ಹಾಲು ಮತ್ತು ಮೊಸರಿನ(Milk and Curd) ದರ 3 ರೂ. ಏರಿಕೆಯಾಗಲಿದೆಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲಾನ್ ಮಾಡಲಾಗಿದೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!
ಬೆಲೆ ಏರಿಕೆಗೆ ಕಾರಣ?
ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ , ವಿದ್ಯುತ್ , ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಾಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.
Sign in to your account
Username or Email Address


Password

 Remember Me


