ಚಿಕ್ಕಬಳ್ಳಾಪುರ: ಆಕೆ ತನ್ನ ಸ್ವಂತ ಅಕ್ಕನ ಗಂಡನನ್ನೇ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಕಾಡಿ ಬೇಡಿ ಮದುವೆ (Brother in Law Marriage) ಯಾಗಿದ್ದಳಂತೆ. ಆದರೆ ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಈಗ ಮತ್ತೋರ್ವ ಯುವಕನ ಜೊತೆ ಕದ್ದು ಮುಚ್ಚಿ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಕೊಂಡು ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಇದು ಪೋಷಕರ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಪೊಲೀಸ್ ಠಾಣೆ ಬಳಿ ತಮ್ಮ ಮಗಳ ಹಾಗೂ ಆಕೆಯ ಹೊಸ ಗಂಡನ ಕಾರು ಅಡ್ಡಗಟ್ಟಿ ಗಲಾಟೆ ಮಾಡಿ ಹೈಡ್ರಾಮಾ ನಡೆಸಿದ್ದಾರೆ.ಹೌದು ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ಮೂಲದ ಜಯಮ್ಮ ನಾರಾಯಣಪ್ಪ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಹಿರಿಯ ಮಗಳು ಮಂಜಳಾರನ್ನ ಆಂಧ್ರದ ವಿ.ಕೋಟೆಯ ಸುಬ್ರಮಣ್ಯ ಜೊತೆ 17 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಇವರ ಕಿರಿಯ ಮಗಳು ದಿವ್ಯಾ ತನ್ನ ಅಕ್ಕನ ಗಂಡ ಭಾವ ಸುಬ್ರಮಣ್ಯನನ್ನೇ ಕಾಡಿ ಬೇಡಿ ಪ್ರೀತಿಸಿ ಮನೆಯವರು ಬೇಡ ಅಂದ್ರೂ ಕಳೆದ ವರ್ಷ ನವೆಂಬರ್ 2021ರಲ್ಲಿ ಮದುವೆಯಾದಳಂತೆ. ಆದರೆ ಮದುವೆಯಾಗಿ ವರ್ಷ ಕಳೆಯುವುದರೊಳಗೆ ಈಗ ಕೊರಿಯರ್ ಬಾಯ್ ಚಂದ್ರಶೇಖರ್ ಎಂಬಾತನನ್ನು ಪ್ರೀತಿಸಿ ಕದ್ದು ಮುಚ್ಚಿ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಕೊಂಡು ಮನೆಯಿಂದ ಎಸ್ಕೇಪ್ ಆಗಿದ್ದಾಳೆ.ದಿವ್ಯ ಪದವೀಧರೆ ಆಗಿದ್ದು ಮುಳುಬಾಗಿಲು ಡಿಸಿಸಿ ಬ್ಯಾಂಕ್‍ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ ಕೊರಿಯರ್ ಬಾಯ್ ಚಂದ್ರಶೇಖರ್ ಪರಿಚಯವಾಗಿದೆಯಂತೆ. ಆತನ ಜೊತೆ ಪ್ರೇಮಾಂಕುರವಾಗಿ ಭಾವನನ್ನ ಬಿಟ್ಟು ಬಂದು ಚಂದ್ರಶೇಖರ್ ಜೊತೆ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ. ಆದರೆ ಪೋಷಕರು ಈಕೆಯ ಮದುವೆ, ಕೆಲಸಕ್ಕಾಗಿ 15 ಲಕ್ಷ ಖರ್ಚು ಮಾಡಿದ್ದೇವೆ ಎನ್ನುತ್ತಿದ್ದರೆ ದಿವ್ಯಾ ಮಾತ್ರ ನನ್ನ ಭಾವನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ರು ಆರೋಪಿಸುತ್ತಿದ್ದಾಳೆ. ಇದನ್ನೂ ಓದಿ: ತನ್ನ ಹೆಂಡತಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿದ ಗಂಡ – ಮದುವೆನೂ ಮಾಡಿಸಿದದಿವ್ಯಾ ಮದ್ವೆಗೂ ಮುನ್ನ ಚಂದ್ರಶೇಖರ್ ಜೊತೆ ಎಸ್ಕೇಪ್ ಆಗಿದ್ದು, ಪೋಷಕರು ವಾಪಸ್ ಕರೆ ತಂದಿದ್ರು. ಮುಳುಬಾಗಿಲು ಡಿಸಿಸಿ ಬ್ಯಾಂಕ್‍ಗೆ ಹೋದ್ರೆ ಮತ್ತೆ ಚಂದ್ರಶೇಖರ್ ಜೊತೆ ಒಡಿ ಹೋಗ್ತಾಳೆ ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿಸಿಸಿ ಬ್ಯಾಂಕ್‍ಗೆ ಟ್ರಾನ್ಸ್‍ಫರ್ ಮಾಡಿಸಿದ್ರು. ಅಲ್ಲದೇ ಪ್ರತಿದಿನ ಮಗಳ ಜೊತೆ ಕಾವಲಿಗೆ ಅಂತ ತಾಯಿಯೂ ಬರ್ತಿದ್ದರಂತೆ. ಆದರೆ ಅದೊಂದು ದಿನ ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ತಾಯಿಯನ್ನ ಯಮಾರಿಸಿ ದಿವ್ಯ ಚಂದ್ರಶೇಖರ್ ಜೊತೆ ಎಸ್ಕೇಪ್ ಆಗಿದ್ದಳು. ಹೀಗಾಗಿ ನಾಪತ್ತೆ ಪ್ರಕರಣವನ್ನು ದಿವ್ಯಾ ಪೋಷಕರು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ರು. ತನಿಖೆ ಕೈಗೊಂಡ ಪೊಲೀಸರು ದಿವ್ಯ ಹಾಗೂ ಚಂದ್ರಶೇಖರ್ ನನ್ನ ಹುಡುಕಿ ಠಾಣೆಗೆ ಕರೆತಂದಿದ್ದಾರೆ.ಒಟ್ಟಿನಲ್ಲಿ ಕಾನೂನು ಪ್ರಕಾರ ಮೊದಲೇ ಅಕ್ಕನ ಮದುವೆಯಾಗಿದ್ದ ಸುಬ್ರಹಣ್ಯ, ತಂಗಿ ದಿವ್ಯಾಳನ್ನ ಮದುವೆಯಾಗಬಾರದಿತ್ತು. ಇನ್ನೂ ಅಕ್ಕ ಬದುಕಿದ್ರೂ ಅಕ್ಕನ ಗಂಡನನ್ನ ಪ್ರೀತಿಸಿ ವರಿಸಿದ್ದ ದಿವ್ಯ ತಪ್ಪು ಮಾಡಿದ್ದಲ್ಲದೇ ಈಗ ಮದುವೆಯಾದ ನಂತರ ಡಿವೋರ್ಸ್ ಪಡೆಯದೆ ಮತ್ತೊಂದು ಮದುವೆಯಾಗಿದ್ದು ಸಹ ಅಪರಾಧವಾಗಿದೆ. ಇದನ್ನೂ ಓದಿ: ರಾತ್ರಿ 9 ಗಂಟೆಯವರೆಗೆ ಪತಿಗೆ ಡಿಸ್ಟರ್ಬ್ ಮಾಡಲ್ಲ- ಪತ್ನಿ ಸಹಿ ಹಾಕಿರುವ ಪತ್ರ ವೈರಲ್
Sign in to your account
Username or Email Address


Password

 Remember Me


