ಮಂಡ್ಯ: ರಸ್ತೆ ಗುಂಡಿ (Potholes) ಗೆ ನಿವೃತ್ತ ಯೋಧ (Soldier) ಬಲಿಯಾಗಿರುವ ಘಟನೆ ಮಂಡ್ಯದ ಕಾರೆಮನೆ ಗೇಟ್ ಬಳಿ ಜರುಗಿದೆ.ಎಸ್.ಎನ್ ಕುಮಾರ್ (39) ಮೃತ ನಿವೃತ್ತ ಯೋಧ. ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಕುಮಾರ್ ಈ ಘಟನೆ ಜರುಗಿದೆ. ಸಾತನೂರಿನಿಂದ ಮಂಡ್ಯಗೆ ಬರುತ್ತಿದ್ದ ವೇಳೆ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.ಗುಂಡಿಯನ್ನು ತಪ್ಪಿಸಲು ಹೋಗಿ ಎದುರಿನಿಂದ ಬಂದ ಬೈಕ್‍ (Bike) ಗೆ ಡಿಕ್ಕಿ ಹೊಡೆದ ಕೆಳಗೆ ಬಿದ್ದ ಕುಮಾರ್‍ಗೆ ಹಿಂದಿನಿಂದ ಬಂದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವವನ್ನಪ್ಪಿದ್ದಾರೆ. ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಲಬುರಗಿಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ನಿವೃತ್ತಿ ಬಳಿಕ ಪೊಲೀಸ್ ಪೇದೆಯಾಗಿ ತರಬೇತಿಗೆ ಹೋಗುತ್ತಿದ್ದರು. ನಿನ್ನೆ ಸ್ವಗ್ರಾಮ ಸಾತನೂರು ಗ್ರಾಮಕ್ಕೆ ಕುಮಾರ್ ಬಂದಿದ್ದ ವೇಳೆ ಈ ಘಟನೆ ಜರುಗಿದ್ದು, ಮಂಡ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sign in to your account
Username or Email Address


Password

 Remember Me


