ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ (Communal) ಯುವಕರ ನಡುವೆ ಘರ್ಷಣೆ ಸಂಭವಿಸಿ, ಮೂವರು ಗಾಯಗೊಂಡ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿಯ ಗಾಂಧಿ ವೃತ್ತದಲ್ಲಿ ನಡೆದಿದೆ.ಮತ್ತೊಂದು ಘಟನೆಯಲ್ಲಿ ಭದ್ರಾವತಿಯ ಸರ್ಕಾರಿ ಆಸ್ಪತ್ರೆ ಬಳಿ ರಿಜ್ವಾನ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಕಳೆದ ತಿಂಗಳು ಹುಟ್ಟುಹಬ್ಬದ ಅಂಗವಾಗಿ ಗೌತಮ್ ಎಂಬಾತ ತನ್ನ ಮೊಬೈಲ್‍ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಈ ಸ್ಟೇಟಸ್‍ಗೆ ಜಹೀರ್ ಕೀಟಲೆ ಮಾಡಿದ್ದ. ಈ ವಿಷಯವಾಗಿ ಇಂದು ರಾತ್ರಿ ಗಾಂಧಿ ವೃತ್ತದ ಬಳಿ ಹರೀಶ್, ಗೌತಮ್ ಹಾಗೂ ಜಹೀರ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ. ಇದನ್ನೂ ಓದಿ: ಹಿಂದೂಗಳು ಸಂತಾನ ನಿಯಂತ್ರಣ ಮಾಡದೇ ಹೆಚ್ಚು ಮಕ್ಕಳನ್ನು ಪಡೆಯಬೇಕು: ಸ್ವರ್ಣವಲ್ಲಿ ಶ್ರೀಈ ವೇಳೆ ಗೌತಮ್ ಹಾಗೂ ಹರೀಶ್‍ಗೆ ಗಾಯವಾಗಿದ್ದು, ಇಬ್ಬರನ್ನು ಚಿಕಿತ್ಸೆಗಾಗಿ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಎರಡು ಕೋಮಿನ ಯುವಕರು ಜಮಾಯಿಸಿದ್ದಾರೆ. ಆಸ್ಪತ್ರೆ ಬಳಿ ಅರವಿಂದ್ ಎಂಬಾತ ಗಾಯಗೊಂಡರೆ, ರಿಜ್ವಾನ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಚಾಕು ಇರಿತಕ್ಕೊಳಗಾದ ರಿಜ್ವಾನ್‍ನನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ಆಸ್ಪತ್ರೆಗೆ ಹಾಗೂ ಗಾಂಧಿ ವೃತ್ತಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳದಲ್ಲಿದ್ದ ಗುಂಪನ್ನು ಚದುರಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಜೈ ಶ್ರೀರಾಮ್ ಶಾಲು ಧರಿಸಿ ಉಜ್ಜಯಿನಿಯಲ್ಲಿ ಡಿಕೆಶಿ
Sign in to your account
Username or Email Address


Password

 Remember Me


