ಲಂಡನ್‌: ಇಂಗ್ಲೆಂಡ್‌ನ ಪ್ರಸಿದ್ಧ ಲಿವರ್‌ಪೂಲ್‌(Liverpool) ಫುಟ್‌ಬಾಲ್‌ ತಂಡವನ್ನು ಮುಕೇಶ್‌ ಅಂಬಾನಿ(Mukesh Ambani ) ಖರೀದಿಸಲು ಮುಂದಾಗಿದ್ದಾರೆ.ವಿಶ್ವದ 8ನೇ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಈಗಾಲೇ ಐಪಿಎಲ್‌ನಲ್ಲಿ(IPL) ಮುಂಬೈ ಇಂಡಿಯನ್ಸ್‌ ತಂಡವನ್ನು ಖರೀದಿಸಿದ್ದಾರೆ. ಈಗ ಫುಟ್‌ಬಾಲ್‌ ತಂಡದ ಮೇಲೆ ಕಣ್ಣಿಟ್ಟಿದ್ದಾರೆ.ಲಿವರ್‌ಪೂಲ್‌ ಮಾಲೀಕತ್ವ ಹೊಂದಿರುವ ಫೆನ್‌ವೇ ಸ್ಫೋರ್ಟ್ಸ್‌ ಗ್ರೂಪ್‌ ತಂಡವನ್ನು 4 ಶತಕೋಟಿ ಪೌಂಡ್‌ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ICC ಹಣಕಾಸು ಸಮಿತಿಗೆ ಅಮಿತ್ ಶಾ ಪುತ್ರ ಮುಖ್ಯಸ್ಥ – ದಾದಾಗಿಲ್ಲ BCCI ಬೆಂಬಲಲಿವರ್‌ಪೂಲ್‌ ತಂಡವನ್ನು ಭಾರತದ ಕಂಪನಿಗಳು ಖರೀದಿಸುತ್ತಿರುವ ಸುದ್ದಿಯಾಗುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ 2010ರಲ್ಲಿ ಸಹರಾ ಕಂಪನಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ.51 ರಷ್ಟು ಪಾಲನ್ನು ಖರೀದಿಸುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಈ ವದಂತಿಯನ್ನು ಲಿವರ್‌ಪೂಲ್‌ ನಿರಾಕರಿಸಿತ್ತು.
Sign in to your account
Username or Email Address


Password

 Remember Me


