ತುಮಕೂರು: ಗಂಡನ ಮನೆ ಹೋಗು ಎಂದು ತಾಯಿ(Mother) ತನ್ನ ಮಗಳಿಗೆ ಬುದ್ದಿವಾದ ಹೇಳಿದ್ದಕ್ಕೆ ಬೇಸರಗೊಂಡ ಗೃಹಿಣಿರ್ಯೋವಳು(Woman) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ಪಟ್ಟಣದ ಉಪ್ಪಾರಬೀದಿಯಲ್ಲಿ(ಮಾವಿನತೋಪು) ನಡೆದಿದೆ.ಉಪ್ಪಾರಬೀದಿ ನಿವಾಸಿ ಐಶ್ವರ್ಯ (20) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ತಾಯಿ ನೀಡಿದ ದೂರಿನ ಅನ್ವಯ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏನಿದು ಘಟನೆ?
ಐಶ್ವರ್ಯ‌ ಕುಣಿಗಲ್ ತಾಲೂಕಿನ ಅಮೃತೂರಿನ ಅನಿಲ್‌ಕುಮಾರ್‌ ಜೊತೆ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದು, 2021ರಲ್ಲಿ ಐಶ್ವರ್ಯ ಗರ್ಭಿಣಿಯಾಗಿದ್ದಳು. ಈ ಸಂದರ್ಭದಲ್ಲಿ ಐಶ್ವರ್ಯಳ ಮೈದುನ ಮತ್ತು ನಾದಿನಿಗೆ ಕೊರೊನಾ(Corona) ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತಿ ಅನಿಲ್‌ಕುಮಾರ್ ಪತ್ನಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದರು.ತವರು ಮನೆಯಲ್ಲೇ ಹೆರಿಗೆ ಆಗಿ ಹಲವು ತಿಂಗಳು ಕಳೆದರೂ ಐಶ್ವರ್ಯ ಗಂಡನ ಮನೆಗೆ ಹೋಗಿರಲಿಲ್ಲ. ಹೀಗಾಗಿ ತಾಯಿ ಮಗಳಿಗೆ ಗಂಡನ ಮನೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅಧಿಕೃತ ಘೋಷಣೆಬುದ್ಧಿವಾದದಿಂದ ಬೇಸರಗೊಂಡಿದ್ದ ಐಶ್ವರ್ಯ ತಾಯಿ ಮದುವೆಗೆ ಹೋಗಿದ್ದ ವೇಳೆಯಲ್ಲಿ ಯಾರು ಇಲ್ಲದಾಗ ಮನೆಯ ಕೊಠಡಿಯಲ್ಲಿ ಕುತ್ತಿಗೆಗೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Sign in to your account
Username or Email Address


Password

 Remember Me


