ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಿನ್ನೆ(ನವೆಂಬರ್ 12) ಬೆಂಗಳೂರಿನ (Bengaluru) ವಿದ್ಯಾರಣ್ಯಪುರಂ ಪೊಲೀಸ್ ಠಾಣಾ (Vidyaranyapura Police Station) ವ್ಯಾಪ್ತಿಯಲ್ಲಿ ನಡೆದಿದೆ.ಘಟನೆ ನಂತರ ರೋಚಕ ಸತ್ಯಗಳು ಬಯಲಾಗಿದೆ. ತನ್ನ ಪತಿಯನ್ನು(Husband) ಕೊಲೆ ಮಾಡುವುದಕ್ಕಾಗಿಯೇ ಪ್ರಿಯಕರನನ್ನು 9 ದಿನ ಸ್ಟೋರ್ ರೂಮಿನಲ್ಲಿ ಬಚ್ಚಿಟ್ಟಿದ್ದಳು. ನಂತರ ಪತಿಗೆ ಮದ್ಯ ಕುಡಿಸಿ, ಚಿಕನ್ ಕಬಾಬ್ ತಿನ್ನಿಸಿ, ಮತ್ತಿನಲ್ಲಿದ್ದಾಗ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ
ಪಶ್ಚಿಮ ಬಂಗಾಳ (WestBengal) ಮೂಲದ ದೇವಿ ತೋಮಾಂಗ್ (46) ಮತ್ತು ಅಸ್ಸಾಂ ಮೂಲದ ಪ್ರಿಯಕರ ಜೈನುಲ್ ಅಲಿಬಾಬು (28) ಆರೋಪಿಗಳು ಇದೀಗ ಪೊಲೀಸರಿಗೆ (Police) ಅತಿಥಿಯಾಗಿದ್ದಾರೆ. ಆರೋಪಿಗಳಿಬ್ಬರು ನವೆಂಬರ್ 6ರಂದು ವಡೇರಹಳ್ಳಿಯಲ್ಲಿ ರಾಕೇಶ್ ತೋಮಾಂಗ್ (52)ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಇದನ್ನೂ ಓದಿ: ದ್ರೌಪದಿ ಮುರ್ಮು ನೋಡಲು ಹೇಗಿದ್ದಾರೆ ಗೊತ್ತಲ್ಲ- ವಿವಾದವಾಗ್ತಿದ್ದಂತೆ ಟಿಎಂಸಿ ಸಚಿವ ಕ್ಷಮೆಪತಿಗೆ ಲೈಂಗಿಕ ಆಸಕ್ತಿ ಕಡಿಮೆ: 
ಕೊಲೆಯಾದ ರಾಕೇಶ್‌ಗೆ ಮದ್ಯ ಸೇವಿಸುವ ಚಟವಿತ್ತು. ಲೈಂಗಿಕ ಆಸಕ್ತಿ ಕಡಿಮೆ ಇತ್ತು. ಇದರಿಂದಾಗಿ 28 ವರ್ಷದ ಜೈನುಲ್ ಜೊತೆ ದೇವಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ರಾಕೇಶ್ ಆಗಾಗ ಮದ್ಯ ಸೇವಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತಿದ್ದ ದೇವಿ ರಾಕೇಶ್ ಕೊಲೆಗೆ ಪ್ರಿಯಕರನಿಗೆ ಸುಪಾರಿ ನೀಡಿದ್ದಳು. ಅದರಂತೆ ನವೆಂಬರ್ 5ರ ರಾತ್ರಿ ರಾಕೇಶ್ ಮನೆಗೆ ಬಂದಾಗ ಕಂಠಪೂರ್ತಿ ಕುಡಿಸಿ (Drinks), ಕಬಾಬ್ ತಿನ್ನಿಸಿದ್ದಳು. ನಂತರ ಇಬ್ಬರೂ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮಾರನೇ ದಿನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಟಕವಾಡಿದ್ದ ದೇವಿ ರಹಸ್ಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯಿತು.ಗಂಡಸ್ತನಕ್ಕೆ ಸವಾಲ್: 
ಅಕ್ರಮಕ್ಕೆ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರಾಕೇಶ್‌ನನ್ನು ಕೊಲೆ ಮಾಡಿದರೆ ಮಾತ್ರ ನನ್ನ ಜೊತೆ ಮಲಗಲು ಅವಕಾಶ ನೀಡುತ್ತೇನೆ. ನೀನು ಗಂಡಸಾಗಿದ್ರೆ ಅವನನ್ನು ಕೊಲೆ ಮಾಡು ಎಂದು ದೇವಿ ಪ್ರಿಯಕರನಿಗೇ ಸವಾಲ್ ಹಾಕಿದ್ದಳು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಪತಿಯ ಹಣ ಪ್ರಿಯಕರನಿಗೆ ವರ್ಗ: 
ಪತಿ ಕೊಲೆಯಾದ ಮಾರನೇ ದಿನ ರಾಕೇಶ್ ಫೋನ್‌ಪೇಯಿಂದ ಪ್ರಿಯಕರ ಜೈನುಲ್‌ಗೆ 50 ಸಾವಿರ ಹಣ ಕಳಿಸಿದ್ದಳು. ಅಷ್ಟೇ ಅಲ್ಲದೇ ತನ್ನದೇ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿ ಪ್ರಿಯಕರನಿಗೆ ಕೊಟ್ಟಿದ್ದಳು. ಬಳಿಕ ದೇವಿ ಫೋನ್‌ಕಾಲ್ಸ್ ಮತ್ತು ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಪರಿಶೀಲಿಸಿದಾಗ ಆರೋಪಿ ಜೈನುಲ್ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಇಬ್ಬರೂ ಅಂದರ್ ಆಗಿದ್ದಾರೆ.ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ (Vidyaranyapura Police Station) ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Sign in to your account
Username or Email Address


Password

 Remember Me


