ಕಿರುತೆರೆಯ `ಬ್ರಹ್ಮಗಂಟು'(Bramhagantu Serial) ಸೀರಿಯಲ್ ಮೂಲಕ ಮನೆಮಾತಾದ ನಟ ಭರತ್ ಭೋಪಣ್ಣ(Bharath Bopanna) ಕನ್ನಡದ `ಡೆಮೋಪೀಸ್’ ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದರು. ಇದೀಗ ಕೊಡಗಿನ ಕುವರ ಭರತ್ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ.  A post shared by Bharat Bopana (@iambharathbopanna7)ಟಿವಿ ಲೋಕದಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಛಾಪೂ ಮೂಡಿಸಿದ್ದ ಭರತ್ ಭೋಪಣ್ಣ ಡೆಮೋ ಪೀಸ್(Demo Piece) ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಇನ್ನೂ `ವಿಜಯಾನಂದ’ (Demopiece) ಚಿತ್ರದಲ್ಲೂ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವ ಭರತ್ ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ಆಲಿಯಾ ರಣಬೀರ್ ಮಗು ನೋಡೋಕೆ ಕೋವಿಡ್ ಟೆಸ್ಟ್ ಕಡ್ಡಾಯ  A post shared by Bharat Bopana (@iambharathbopanna7)
ಕಂಗನಾ ನಟನೆಯ `ತಲೈವಿ’ ಚಿತ್ರದ ಡೈರೆಕ್ಟರ್ ವಿಜಯ್ ನಿರ್ದೇಶನದ `ಅಚ್ಚಚ್ಚಮ್ ಎಂಬತ್ತು ಇಳಯೇ’ ಚಿತ್ರದಲ್ಲಿ ಅರುಣ್ ವಿಜಯ್ ನಾಯಕನಾಗಿದ್ದು, ಈ ಚಿತ್ರದಲ್ಲಿ ಭರತ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನ ಲಂಡನ್‌ನಲ್ಲಿ ಮುಗಿಸಿ ಬಂದಿದ್ದಾರೆ.  A post shared by Bharat Bopana (@iambharathbopanna7)ಕನ್ನಡ ಕಿರುತೆರೆ, ಸ್ಯಾಂಡಲ್‌ವುಡ್ ನಂತರ ಇದೀಗ ತಮಿಳು ಚಿತ್ರರಂಗದಲ್ಲಿ ಕನ್ನಡದ ಪ್ರತಿಭೆ ಮಿಂಚಲು ಸಿದ್ಧವಾಗಿದೆ. ಪ್ರತಿಭೆ ಮತ್ತು ಅದೃಷ್ಟದ ಮೂಲಕ ಭರತ್‌ ಸೌತ್‌ ಸಿನಿರಂಗದಲ್ಲೂ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.
Sign in to your account
Username or Email Address


Password

 Remember Me


