ಬಿಗ್ ಬಾಸ್ ಮನೆಯಲ್ಲಿ(Bigg Boss House) ರೂಪೇಶ್ ಮತ್ತು ಸಾನ್ಯ ಜೋಡಿಯಾಗಿ ಹೈಲೈಟ್ ಆಗಿದ್ದರು. ಆದರೆ ದೊಡ್ಮನೆಯ ಎಲಿಮಿನೇಷನ್‌ನಿಂದ ಸಾನ್ಯ ಹೊರಬಂದಿದ್ದರು. ಇದಾದ ಬಳಿಕ ಸಾನ್ಯಗಾಗಿ ಕಣ್ಣೀರಿಡುತ್ತಲೇ ಎರಡೆರಡು ಪ್ಲೇಟ್ ಇಟ್ಟುಕೊಂಡು ಊಟ ಮಾಡಿದ್ದರು. ಇದೀಗ ಈ ವಿಷ್ಯವಾಗಿ ಶೆಟ್ಟ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.ಓಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ ಸಾನ್ಯ ಮತ್ತು ರೂಪೇಶ್ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದರು. ಜೊತೆಯಾಗಿಯೇ ಇರುತ್ತಿದ್ದರು. ಆದರೆ ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಶೆಟ್ಟಿಗೆ(Roopesh Shetty) ದೊಡ್ಡ ಆಘಾತವೇ ಆಗಿತ್ತು. ಪ್ರತಿದಿನ ಕಣ್ಣೀರಿಡುತ್ತಲೇ ಇದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ. ಸಾನ್ಯ ಹೋದ ನಂತರದಲ್ಲಿ ರೂಪೇಶ್‌ಗೆ ಒಂಟಿತನ ಕಾಡಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಊಟ ಮಾಡುವಾಗ ಸಾನ್ಯ ಅಯ್ಯರ್(Sanya Iyer) ಹೆಸರಲ್ಲಿ ಒಂದು ಪ್ಲೇಟ್ ತೆಗೆದುಕೊಂಡು ಬಂದಿದ್ದಾರೆ ರೂಪೇಶ್ ಶೆಟ್ಟಿ. ತಮ್ಮ ಪ್ಲೇಟ್‌ನ ಊಟವನ್ನು ಆ ಪ್ಲೇಟ್‌ಗೆ ಹಾಕಿಕೊಂಡು ಊಟ ಮಾಡಿದ್ದಾರೆ. ಸಾನ್ಯ ನೆನಪಲ್ಲಿ ಎರಡು ಪ್ಲೇಟ್‌ನಲ್ಲಿ ಅವರು ಊಟ ಮಾಡಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್‌ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರ ಕಾಲೆಳೆದಿದ್ದಾರೆ ಕಿಚ್ಚ. ಆಪ್ತರಾದವರು ಬಿಟ್ಟು ಹೋದಾಗ ಊಟ ಮಾಡುವವರು ಊಟ ಬಿಟ್ಟಿದ್ದು ನೋಡಿದ್ದೀನಿ. ಗಡ್ಡ ಬಿಟ್ಟಿದ್ದನ್ನು ನೋಡಿದ್ದೀನಿ. ಆದರೆ, ಆಪ್ತರಾದವರು ಬಿಟ್ಟು ಹೋದಾಗ ಎರಡೆರಡು ಪ್ಲೇಟ್ ಊಟ ಮಾಡಿದ್ದು, ಎಕ್ಸ್ಟ್ರಾ ಮೊಟ್ಟೆ ತಿಂದ್ರಿ. ಮಿಸ್ ಮಾಡಿಕೊಂಡ್ರೆ ಹೀಗೆ ಮಿಸ್ ಮಾಡ್ಕೊಬೇಕು ಎಂದು ರೂಪೇಶ್ ಅವರ ಕಾಲೆಳೆದರು ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್ಅಂದಹಾಗೆ, ಸಾನ್ಯ ಅಯ್ಯರ್ 6ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದರು. ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷ್ಯ ನಿಜವೇ ಆದರೆ ಆಟದಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ. ಎಲ್ಲದ್ದಕ್ಕೂ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


