ಧಾರವಾಡ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಧಾರವಾಡದ ನ್ಯಾಯಾಲಯದಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಕೇಸ್ ನೋಡಿದರೆನೇ ವಿಚಿತ್ರ ಎನಿಸುತ್ತದೆ. ಏಕೆಂದರೆ ಪತ್ನಿ ತನ್ನ ಪತಿಗೆ ಬಾರೋ ಎಂದಿದ್ದಕ್ಕೆ ಪತಿರಾಯ ನ್ಯಾಯಾಲಯದ ಮೇಟ್ಟಿಲು ಏರಿದರೆ, ಮತ್ತೊಂದು ಪ್ರಕರಣದಲ್ಲಿ ಪತ್ನಿ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಬಂದಿತ್ತು. ಇದೀಗ ಈ ಪ್ರಕರಣಗಳನ್ನು ನ್ಯಾಯಾಲಯ ಲೋಕ್ ಅದಾಲತ್‍ನಲ್ಲಿ (Lok Adalat) ತೆಗೆದುಕೊಂಡು ಇತ್ಯರ್ಥ ಮಾಡಿದೆ.ಧಾರವಾಡ (Dharwad) ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಪ್ರಕರಣಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಕೆಲ ಗಂಡ ಹೆಂಡತಿಯರು ವಿಚ್ಛೇದನ ಬೇಡ ಎಂದು ಒಪ್ಪಿಕೊಂಡರೆ, ಕೆಲವರು ನ್ಯಾಯಾಲಯದ ಮುಂದೆ ತಮ್ಮ ಒಪ್ಪಿಗೆ ಸೂಚಿಸಲೇ ಇಲ್ಲ. ಅದರಲ್ಲೂ ಒಂದು ಜೋಡಿಯಂತೂ ಪೆನ್ ಡ್ರೈವ್ ವಿಚಾರಕ್ಕೆ ವಿಚ್ಛೇದನ ಹಾಕಿಕೊಂಡಿದ್ದರು. ಪತ್ನಿ ತನ್ನ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಾಳಂತೆ. ಅದಕ್ಕೆ ಪತಿ ಅದನ್ನು ಕೊಟ್ಟರೆ ಮಾತ್ರ ನಾನು ರಾಜಿಯಾಗುತ್ತೇನೆ ಅಂತ ನಿಂತಿದ್ದ. ಇದನ್ನೂ ಓದಿ: ಮೃತ ತಂದೆಯನ್ನು ಬದುಕಿಸಲು ಮಗುವನ್ನು ಅಪಹರಿಸಿ ನರ ಬಲಿ ಕೊಡಲು ಸಿದ್ಧವಾದ್ಲುಮತ್ತೊಂದು ಜೋಡಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಗೆ ಬಾರೋ ಎಂದು ಕರೆದ್ದಾಳಂತೆ. ಅದಕ್ಕೆ ಇಬ್ಬರೂ ವಿಚ್ಛೇದನಕ್ಕೆ ಬಂದಿದ್ದರು. ನ್ಯಾಯಾಧೀಶರು ಇವತ್ತು ಇಂತಹ 37 ಕೇಸ್‍ಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು 17 ಕೇಸ್ ಇತ್ಯರ್ಥ ಮಾಡಿದೆ. ಇನ್ನು ಕೆಲ ಪತಿ ಹಾಗೂ ಪತ್ನಿ ನ್ಯಾಯಾಲಯದ ಮಾತು ಕೇಳದೇ ಇರುವುದರಿಂದ ಅವರಿಗೆ ಮತ್ತೆ ಮುಂದಿನ ದಿನಾಂಕಕ್ಕೆ ಹಾಜರಾಗಲು ಹೇಳಲಾಗಿದೆ. ಮತ್ತೆ ಕೆಲವರಿಗೆ ಸ್ವಲ್ಪ ದಿನ ಒಂದೇ ಕಡೆ ಇರುವಂತೆ ಸೂಚನೆ ಕೊಟ್ಟು ಕಳುಹಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಲಾಕಪ್‌ಡೆತ್ ಕೇಸ್: ಪೊಲೀಸರಿಂದ್ಲೇ ಚಿತ್ರಹಿಂಸೆ – ಮೃತನ ಪುತ್ರಿ ಆರೋಪಇಬ್ಬರು ಸ್ವಲ್ಪ ದಿನಗಳಲ್ಲಿ ಒಂದಾಗಿ ಬಾಳಿದರೆ ಮುಂದೆ ನ್ಯಾಯಾಲಯ ಇವರ ಮದ್ಯದಲ್ಲಿ ಪ್ರವೇಶ ಮಾಡಲ್ಲ. ಹೊಂದಾಣಿಕೆ ಆಗದೇ ಇದ್ದರೆ ಮಾತ್ರ ನ್ಯಾಯಾಲಯ ಮತ್ತೊಂದು ಚಾನ್ಸ್ ಕೊಡಲಿದೆ. ಸದ್ಯ ಒಂದಾದ ಗಂಡ ಹೆಂಡತಿ ಕೂಡ ನ್ಯಾಯಾಲಯದ ಈ ಅದಾಲತ್‍ದಿಂದ ಒಂದಾಗಿ ಸಂತಸ ವ್ಯಕ್ತಪಡಿಸಿದೆ.
Sign in to your account
Username or Email Address


Password

 Remember Me


