ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಇನ್ನೂ ಮೂರು ದಿನ ಇದೇ ಸ್ಥಿತಿ ಮುಂದುವರಿಯಲಿದ್ದು, ಚಳಿಯ ವಾತಾವರಣದಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವುದರಿಂದ 4 ದಿನಗಳ ಕಾಲ ಹಲವೆಡೆ ಮೋಡ ಕವಿದ ವಾತಾವರಣ ಜೊತೆಗೆ ಅಧಿಕ ಮಳೆಯಾಗುತ್ತಿದೆ. ದೀಪಾವಳಿಯ ನಂತರ ಚಳಿ ಹೆಚ್ಚಾಗುವುದು ವಾಡಿಕೆ, ಆದರೆ ಈ ಬಾರಿ ಉತ್ತರ ಮತ್ತು ಉತ್ತರ ಭಾರತದಿಂದ ಶೀತ ಮಾರುತ ಬೀಸುತ್ತಿರುವುದು ಮತ್ತು ಬಂಗಾಳಕೊಲ್ಲಿಯಲ್ಲಿ ಈಗಲೇ ಕಡಿಮೆ ಒತ್ತಡ ಪ್ರದೇಶ ಸೇರಿದಂತೆ ತಮಿಳುನಾಡಿನ ಹಲವೆಡೆ ಮಳೆಯಾಗಿದೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಇನ್ನೊಂದು ವಾಯುಭಾರ ಸೃಷ್ಟಿಗೆ ಪೂರಕ ವಾತವಾರಣ ಸೃಷ್ಟಿಯಾಗಲಿದೆ. ಇದರಿಂದ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.ಇಂದು ಕರಾವಳಿಯ ಹಲವು ಕಡೆ, ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ 13, 14, 15ನೇ ತಾರೀಖು ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇಂದು ದಕ್ಷಿಣ ಒಳನಾಡಿನ ಕೊಡಗು, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 32-25
ಶಿವಮೊಗ್ಗ: 30-21
ಬೆಳಗಾವಿ: 31-20
ಮೈಸೂರು: 27-20
ಮಂಡ್ಯ: 28-21ಮಡಿಕೇರಿ: 25-17
ರಾಮನಗರ: 27-20
ಹಾಸನ: 27-19
ಚಾಮರಾಜನಗರ: 27-20
ಚಿಕ್ಕಬಳ್ಳಾಪುರ: 24-19
ಕೋಲಾರ: 24-19ತುಮಕೂರು: 26-19
ಉಡುಪಿ: 33-25
ಕಾರವಾರ: 34-26
ಚಿಕ್ಕಮಗಳೂರು: 26-19
ದಾವಣಗೆರೆ: 29-21ಚಿತ್ರದುರ್ಗ: 27-20
ಹಾವೇರಿ: 30-21
ಬಳ್ಳಾರಿ: 29-22
ಗದಗ: 31-21
ಕೊಪ್ಪಳ: 30-22
ರಾಯಚೂರು: 32-22ಯಾದಗಿರಿ: 32-21
ವಿಜಯಪುರ: 32-21
ಬೀದರ್: 29-28
ಕಲಬುರಗಿ: 32-21
ಬಾಗಲಕೋಟೆ: 32-22
Live Tv
[brid partner=56869869 player=32851 video=960834 autoplay=true]








 Advertisement 




Sign in to your account
Username or Email Address


Password

 Remember Me


