ಬೆಂಗಳೂರು: ಮತ್ತೊಮ್ಮೆ ಹೊಟೇಲ್ (Hotel) ತಿನಿಸು (Food) ದರ ಹೆಚ್ಚಾಗುವ (Price Hike) ಸಾಧ್ಯತೆ ಇದೆ. ಯಾಕಂದ್ರೆ ಕಮರ್ಷಿಯಲ್ ಗ್ಯಾಸ್‍ಗಳಿಗೆ (Commercial Gas) ಕೊಡುತ್ತಿದ್ದ ಡಿಸ್ಕೌಂಟ್ (Discount) ಕಟ್ ಆಗಿದೆ. ಇದರಿಂದ ಹೊಟೇಲ್ ಉದ್ಯಮಿಗಳಿಗೆ ಮತ್ತೆ ಹೊರೆ ಹೆಚ್ಚಾಗಳಿದೆ.ಈ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಹೆಚ್ಚಿದೆ. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಹೋಟೆಲ್‍ಗಳು ಬಳಸುವ ವಾಣಿಜ್ಯ ಗ್ಯಾಸ್‍ಗಳನ್ನು ಪೂರೈಸುತ್ತಿದ್ದ ಮೂರು ಕಂಪನಿಗಳು ಹಲವು ರಿಯಾಯತಿಯಲ್ಲಿ ಸಿಲಿಂಡರ್‌ಗಳನ್ನು ನೀಡುತ್ತಿದ್ದವು ಇದೀಗ ಈ ಡಿಸ್ಕೌಂಟ್ ಕಡಿತಗೊಳಿಸಿರುವ ಪರಿಣಾಮ ಗ್ರಾಹಕರಿಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿಈ ಹಿಂದೆ ಕಮರ್ಷಿಯಲ್ ಗ್ಯಾಸ್‍ಗಳಿಗೆ ಕೊಡುತ್ತಿದ್ದ ಡಿಸ್ಕೌಂಟ್ 200 ರಿಂದ 300 ರೂ. ವರೆಗೆ ಇರುತ್ತಿತ್ತು. 50ಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಪಡೆದರೆ ಒಂದು ರಿಯಾಯಿತಿ. 100ಕ್ಕೆ ಒಂದು ರಿಯಾಯಿತಿ ಹಾಗೂ 200ಕ್ಕೆ ಇನ್ನೊಂದು ರಿಯಾಯಿತಿ ಇತ್ತು. ಆದರೆ ಈಗ ಈ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆದ ಕಾರಣ ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ ಬೀಳಲಿದೆ. ಈಗಾಗಲೇ ಅಡುಗೆ ಎಣ್ಣೆ, ತುಪ್ಪ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹೋಟೆಲ್ ಆಹಾರಗಳ ದರ ಹೆಚ್ಚಳಗೊಂಡಿದೆ. ಇದೀಗ ಮತ್ತೊಮ್ಮೆ ಏರಿಕೆಯಾಗುವ ಲಕ್ಷಣ ಕಂಡುಬಂದಿದೆ. ಇದನ್ನೂ ಓದಿ: ಚುಮು ಚುಮು ಚಳಿ ನಡುವೆ ಮಳೆ- ರಾಜ್ಯದಲ್ಲಿ 5 ದಿನ ಗುಡುಗು ಸಹಿತ ಮಳೆ
Sign in to your account
Username or Email Address


Password

 Remember Me


