ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವುದರಿಂದ ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.ಇಂದು ಮತ್ತು ನಾಳೆ ಕರಾವಳಿಯ ಹಲವು ಕಡೆ, ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ 13, 14, 15ನೇ ತಾರೀಖು ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ. ನಾಳೆ ದಕ್ಷಿಣ ಒಳನಾಡಿನ ಕೊಡಗು, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಾಳೆ, ನಾಡಿದ್ದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಎರಡು, ಮೂರು ದಿನ ಸಾಧಾರಣ ಮಳೆಯಾಗಲಿದ್ದು, ಬೆಳಗ್ಗೆ ದಟ್ಟ ಮಂಜು ಕವಿದ ವಾತಾವಾರಣದಿಂದ ಕೂಡಿರಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 23-19
ಮಂಗಳೂರು: 31-25
ಶಿವಮೊಗ್ಗ: 29-22
ಬೆಳಗಾವಿ: 31-19
ಮೈಸೂರು: 24-21
ಮಂಡ್ಯ: 24-21ಮಡಿಕೇರಿ: 23-17
ರಾಮನಗರ: 25-21
ಹಾಸನ: 25-19
ಚಾಮರಾಜನಗರ: 24-20
ಚಿಕ್ಕಬಳ್ಳಾಪುರ: 22-19
ಕೋಲಾರ: 23-19ತುಮಕೂರು: 24-20
ಉಡುಪಿ: 32-26
ಕಾರವಾರ: 35-26
ಚಿಕ್ಕಮಗಳೂರು: 24-19
ದಾವಣಗೆರೆ: 29-22ಚಿತ್ರದುರ್ಗ: 27-21
ಹಾವೇರಿ: 31-22
ಬಳ್ಳಾರಿ: 29-22
ಗದಗ: 31-21
ಕೊಪ್ಪಳ: 31-21
ರಾಯಚೂರು: 31-21ಯಾದಗಿರಿ: 32-21
ವಿಜಯಪುರ: 32-19
ಬೀದರ್: 29-17
ಕಲಬುರಗಿ: 32-19
ಬಾಗಲಕೋಟೆ: 33-21
 
Live Tv
[brid partner=56869869 player=32851 video=960834 autoplay=true]
 







 Advertisement 




Sign in to your account
Username or Email Address


Password

 Remember Me


