ಉಡುಪಿ: ಕುಡಿತ ಮತ್ತಿನಲ್ಲಿ ತನ್ನ ಪತ್ನಿಯ ಕತ್ತು ಕೊಯ್ದು, ಬಳಿಕ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಪತಿಯನ್ನು ಬಂಧಿಸಿರುವ ಘಟನೆ ಉಡುಪಿ (Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.ಬಸ್ರೂರು ಕಾಶಿಮಠದ ರೆಸಿಡೆನ್ಶಿಯಲ್ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಅನಿತಾ (38) ಗಂಡನಿಂದ ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆ. ಸೊರಬ ತಾಲೂಕು ಮೂಲದ ಲಕ್ಷ್ಮಣ (ರಮೇಶ್) ಹಲ್ಲೆಗೈದ ಪತಿ. ಇದನ್ನೂ ಓದಿ: Belagavi: ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದ ಬೈಕ್ – ಓರ್ವನ ರಕ್ಷಣೆ ಮತ್ತೋರ್ವ ನಾಪತ್ತೆಸೊರಬ ತಾಲೂಕು ಮೂಲದ ಲಕ್ಷ್ಮಣ (ರಮೇಶ್) ಮತ್ತು ಅನಿತಾ ದಂಪತಿ ಕಾಶಿಮಠದ ತೋಟ ನೋಡಿಕೊಳ್ಳುತ್ತಿದ್ದರು. 4 ತಿಂಗಳ ಹಿಂದೆಯಷ್ಟೆ ತೋಟದ ಕೆಲಸಕ್ಕೆ ಬಂದು ಉಡುಪಿಯಲ್ಲಿ ನೆಲೆಸಿದ್ದರು. ಶನಿವಾರ (ಆ.3) ರಾತ್ರಿ ಕುಡಿದ ಮತ್ತಿನಲ್ಲಿದ್ದ ಪತಿ ಲಕ್ಷ್ಮಣ (ರಮೇಶ್) ಪತ್ನಿಯ ಕುತ್ತಿಗೆ ಕೊಯ್ದು ಮಾರಣಾಂತಿಕ ಗಾಸಿಗೊಳಿಸಿದ್ದಾನೆ. ನಂತರ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನ ಕಂಡು ಮನೆ ಬಾಗಿಲು ಹಾಕಿಕೊಂಡು, ಕೈಯಲ್ಲಿ ಕತ್ತಿ ಹಿಡಿದು, ಮನೆಯೊಳಗೆ ನರ್ತಿಸುತ್ತಾ ಪತಿ ವಿಕೃತಿ ಮೆರೆದಿದ್ದಾನೆ.ಇದು ಅರಿವಿಗೆ ಬರುತ್ತಲೇ ಸ್ಥಳೀಯರು ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನ ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದಾಕೆಯನ್ನ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಷ್ಟಾದರೂ ಪತಿ ತನ್ನ ಮೈಮೇಲೆ ದೆವ್ವ ಬಂದವರಂತೆ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಪರಶುರಾಮ ಥೀಮ್ ಪಾರ್ಕ್ ಹಗರಣ – ಬೆಂಗಳೂರಿನ ಗೋಡೌನ್‌ನಲ್ಲಿ ಕಾರ್ಕಳ ಪೊಲೀಸರಿಂದ ಮಹಜರುಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿ ಹತೋಟಿ ತರಲು ಹರಸಾಹಸ ಪಟ್ಟಿದ್ದಾರೆ. ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಸುಮಾರು ಒಂದೂವರೆ ಗಂಟೆಯ ಬಳಿಕ ಆರೋಪಿಯನ್ನ ಸೆರೆಹಿಡಿದಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: 104 ಸಂಭವನೀಯ ಭೂಕುಸಿತ, ಪ್ರವಾಹ ಪ್ರದೇಶಗಳ ಗುರುತು – 2,995 ಕುಟುಂಬಗಳ ಸ್ಥಳಾಂತರಕ್ಕೆ ಪ್ಲ್ಯಾನ್‌Sign in to your account
Username or Email Address


Password

 Remember Me


