ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಆಗಿದ್ದಾರೆ. `ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಮಿಂಚಲಿದ್ದಾರೆ. ಸದ್ಯ ರಮ್ಯಾ ಇತ್ತೀಚೆಗೆ ಧರಿಸಿದ್ದ ದುಬಾರಿ ನೆಕ್ಲೆಸ್ ವಿಷ್ಯವಾಗಿ ಸದ್ದು ಮಾಡ್ತಿದ್ದಾರೆ.ನಿರ್ಮಾಣದ ಮತ್ತು ನಟನೆಯ ಮೂಲಕ ಚಿತ್ರರಂಗದಲ್ಲಿ ಆಕ್ಟೀವ್ ಇರುವ ನಟಿ ರಮ್ಯಾ, `ಉತ್ತರಕಾಂಡ’ ಚಿತ್ರದಲ್ಲಿ ಡಾಲಿಗೆ ನಾಯಕಿಯಾಗಿ ರಮ್ಯಾ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹೀಗಿರುವಾಗ `ಉತ್ತರಕಾಂಡ’ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ನಟಿ, ಜೆರಿ ಸೀರೆಯುಟ್ಟು ಗ್ರ್ಯಾಂಡ್ ಆಗಿ ಬಂದಿದ್ದರು. ಈ ವೇಳೆ ಅವರು ಧರಿಸಿದ್ದ ನೆಕ್ಲೆಸ್ ಕೂಡ ಹೈಲೈಟ್ ಆಗಿದೆ. ಇದನ್ನೂ ಓದಿ:ಅವಳಿ ಮಕ್ಕಳ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಪ್ರೀತಿ ಜಿಂಟಾಇನ್ನೂ ರಮ್ಯಾ ಧರಿಸಿದ್ದ ದುಬಾರಿ ಆಭರಣದ ಬೆಲೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ. ಈ ಚೆಂದದ ನೆಕ್ಲೆಸ್‌ಗೆ ಬರೋಬ್ಬರಿ 20 ಲಕ್ಷ ರೂ. ಎನ್ನಲಾಗಿದೆ. ರಮ್ಯಾ 20 ಲಕ್ಷದ ಅದ್ದೂರಿ ಆಭರಣ ಧರಿಸಿ ಮುಹೂರ್ತಕ್ಕೆ ಬಂದಿದ್ದರು. ಗೋಲ್ಡ್‌ ಪ್ಲೇಟೆಡ್‌ ಆಭರಣವಾಗಿದ್ದು, ಸಿಂಪಲ್‌ ಲುಕ್‌ಯಿದೆ. ಒಟ್ನಲ್ಲಿ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
Sign in to your account
Username or Email Address


Password

 Remember Me


