ಕಲಬುರಗಿ: ಕಾಂಗ್ರೆಸ್ (Congress) ಕಾರ್ಯಕರ್ತರನ್ನು ಕೆಣಕಿದ್ರೆ ಸುಮ್ಮನಿರಲ್ಲ. ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ (BJP) ಮುಖಂಡನನ್ನು ಓಡಾಡಲು ಬಿಡುವುದಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.ವಾಡಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಚಿತ್ತಾಪೂರ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿನಾ ಕಾರಣ ಬಿಜೆಪಿಗರು ಕೆಣಕಿದ್ರೆ ನಾನು ಸುಮ್ಮನಿರುವುದಿಲ್ಲ. ನನ್ನ ಮರ್ಯಾದೆ ಚೌಕಟ್ಟು ದಾಟಿ ಪಾಠ ಕಲಿಸುವೆ ಎಂದು ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ನೀಡಿ, ಖುದ್ದು ಸಿಎಂ ಕರೆ ಮಾಡಿದ್ದಾರೆ – ಬಿಜೆಪಿ ಸ್ಪಷ್ಟನೆನಮ್ಮ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ಖರ್ಗೆ ಸಾಹೇಬರಿಗೆ ಆರು ಸಲ ಹಾಗೂ ನನಗೆ 3 ಸಲ ಜೀವ ಬೆದರಿಕೆ ಕರೆ ಬಂದಿದ್ದವು. ಆದರೂ ನಾವು ಸುಮ್ಮನಿದ್ದೆವು. ಇದೀಗ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆದಾಗ ಸುಮ್ಮನಿರಲ್ಲ ಎಂದು ಖರ್ಗೆ ಸಿಡಿದೆದ್ದಿದ್ದಾರೆ. ಇದನ್ನೂ ಓದಿ: ಕಬ್ಬನ್ ಪಾರ್ಕ್‍ನಲ್ಲಿ ಇನ್ಮುಂದೆ ಹೊಸ ರೂಲ್ಸ್ – ವಾಹನ ಸವಾರರು ಹಾರ್ನ್ ಹೊಡೆದರೆ ದಂಡ
Sign in to your account
Username or Email Address


Password

 Remember Me


