ಹುಬ್ಬಳ್ಳಿ: ಕಾಂಗ್ರೆಸ್ (Congress) ಹಾಗೂ ಬುದ್ಧಿಜೀವಿಗಳ ಕೆಲಸ ಕೇವಲ ಗೊಂದಲ ಸೃಷ್ಟಿಸುವುದಾಗಿದೆ. ನಾವೇನಾದರೂ ಸಿಡಿದೆದ್ದರೆ ಅವರು ಉಳಿಯುವುದಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ವಾರ್ನಿಂಗ್ ನೀಡಿದ್ದಾರೆ.ಹಿಂದೂ (Hindu) ಶಬ್ದದ ಕುರಿತು ಸತೀಶ್ ಜಾರಕಿಹೊಳಿ (Satish Jarkiholi)  ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಬಗ್ಗೆ ಇವರು ಮಾತನಾಡುವುದಿಲ್ಲ. ಅವರಲ್ಲೇ ಹೆಚ್ಚು ಮೌಢ್ಯಗಳಿವೆ ಹೀಗಾಗಿ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ: ಮುತಾಲಿಕ್ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು (Tipu) ಜಯಂತಿ ಕುರಿತಾಗಿ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಬಿಜೆಪಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದೆ. ಟಿಪ್ಪು ಒಬ್ಬ ಮತಾಂಧ, ಕನ್ನಡ ದ್ರೋಹಿ ಅಂತಹ ದ್ರೋಹಿಯ ಜಯಂತಿಗೆ ಅನುಮತಿ ನೀಡಿರುವುದು ಸರಿಯಲ್ಲ. ದೇಶದ್ರೋಹಿಯ ಜಯಂತಿಗೆ ಅನುಮತಿ ನೀಡುವ ಮೂಲಕ ಚುನಾವಣಾ (Election) ಗಿಮಿಕ್ ನಡೆಯುತ್ತಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಪಾಲಿಕೆ ದ್ವಂದ್ವ ನೀತಿ ಅನುಸರಿಸುತ್ತಿದೆ. ನಿನ್ನೆ ಟಿಪ್ಪು ಜಯಂತಿ ಆಚರಣೆ ಮಾಡಿ ಮೈದಾನವನ್ನು ಅಪವಿತ್ರಗೊಳಿಸಿದ್ದಾರೆ. ಹೀಗಾಗಿ ನಾವು ಇಂದು ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
Sign in to your account
Username or Email Address


Password

 Remember Me


