ಶಿವಮೊಗ್ಗ: ಬಾಲಕನಿಗೆ (Boy) ಬೈಕ್ (Bike) ಓಡಿಸಲು ಕೊಟ್ಟ ತಂದೆಗೆ ಕೋರ್ಟ್ (Court) 25 ಸಾವಿರ ರೂ. ದಂಡ  (Fine) ವಿಧಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.ಕಳೆದ ಅ. 18ರಂದು ತೀರ್ಥಹಳ್ಳಿ ಪಟ್ಟಣದಲ್ಲಿ 16 ವರ್ಷದ ಬಾಲಕ ಹೆಲ್ಮೆಟ್ ಧರಿಸದೇ, ಬೈಕ್‌ ಚಾಲನೆ ಮಾಡುತ್ತಿದ್ದ. ಆ ಬಾಲಕನಿಗೆ ಪರವಾನಗಿ ಹೊಂದದೇ ಬೈಕ್ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಇದನ್ನು ನೋಡಿದ ಪೊಲೀಸರು ಆತನನ್ನು ತಡೆದಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರದ ಆರೋಪ – ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ ಅರೆಸ್ಟ್ಬಾಲಕನಿಗೆ ಬೈಕ್ ನೀಡಿ ಚಾಲನೆ ಮಾಡಲು ಅವಕಾಶ ನೀಡಿದ್ದ ಆತನ ತಂದೆ ಆಸೀಫ್ ಪಾಷಾ ವಿರುದ್ದ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಓಡಿಸಿದ ಬಾಲಕನ ತಂದೆಗೆ ದಂಡ ವಿಧಿಸಿದೆ. ಇದನ್ನೂ ಓದಿ:  ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತರು: ಸಾಗರನಹಳ್ಳಿ ನಟರಾಜ್
Sign in to your account
Username or Email Address


Password

 Remember Me


