ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹಿಂದೂ ಅಲ್ಲ, ವೀರಶೈವ ಲಿಂಗಾಯತರು. ಅವರು ವೀರಶೈವ ಲಿಂಗಾಯತರೇ ಆಗಿದ್ದರೆ ಹಿಂದೂ ಆಗಲು ಸಾಧ್ಯವಿಲ್ಲ, ಆದರೆ, ತಾವು ಹಿಂದೂ ಅಲ್ಲ ಎಂದು ಹೇಳಿಕೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಚಾರ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ವಿವಾದಾತ್ಮಕ ಹೇಳಿಕೆ ನೀಡಿದರು.ವೀರಶೈವ – ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವ ತಯಾರಿ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮವನ್ನು ಕೇಳುತ್ತೇವೆ. ಇನ್ನು ತಾವು ಹಿಂದೂ ಹೌದೋ ಅಲ್ಲವೋ ಎಂದು ಹೇಳಿಕೊಳ್ಳುವುದು ಬಿಡುವುದು ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.ನಮ್ಮ ಬೈಲಾವನ್ನಲ್ಲಿ ಒಪ್ಪಿಕೊಂಡು ಬರುವವರಿಗೆ ಸ್ವಾಗತ. ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ. ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸ ಇದೆ. ನಮ್ಮದೇ ಪ್ರತ್ಯೇಕ ಧರ್ಮವಾಗಿದೆ. ಹೇಗೆ ಬೌದ್ಧ ಧರ್ಮ, ಸಿಖ್ ಧರ್ಮ ಅಂತ ಪ್ರತ್ಯೇಕ ಮಾಡಿದ್ದೀರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಬೇಕು. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ – ಭಾವಚಿತ್ರಕ್ಕೆ ಕ್ಷೀರಾಭಿಷೇಕನಮ್ಮಲ್ಲೂ ಆಚರಣೆಗಳು ವಿಭಿನ್ನವಾಗಿವೆ. ಕೆಲವರಿಗೆ ವಿಭೂತಿಧಾರಣೆ ಇಷ್ಟ ಇಲ್ಲದೇ ಇರಬಹುದು. ಇನ್ನೂ ಕೆಲವರಿಗೆ ರುದ್ರಾಕ್ಷಿ ಧಾರಣೆ ಇಷ್ಟ ಇಲ್ಲದಿರಬಹುದು. ಆದರೆ, ಈ ಎಲ್ಲರನ್ನೊಳಗೊಂಡು ವೀರಶೈವ ಲಿಂಗಾಯತ ಧರ್ಮವಿದೆ. ನಾವು ಸಹ ಹಿಂದೂ ಧರ್ಮದ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ನಮ್ಮ ಆಚರಣೆ, ಶಾಸ್ತ್ರ, ಸಂಸ್ಕೃತಿ ಬೇರೆ ಎಂದರು. ಇದನ್ನೂ ಓದಿ: ಪತ್ನಿಯನ್ನು ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾದ ಪಾಪಿ ಪತಿ
Sign in to your account
Username or Email Address


Password

 Remember Me


