`ಕಾಂತಾರ’ (Kantara) ಅಬ್ಬರ ಜೋರಾಗಿದೆ. ಕನ್ನಡದ ಸಿನಿಮಾ ಇದೀಗ ಗಡಿ ದಾಟಿ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ(Rishab Shetty) ಸದ್ಯ ಹಿಂದಿ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಕುರಿತು ಮೌನ ಮುರಿದಿದ್ದಾರೆ.ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ರಿಷಬ್ ಶೆಟ್ಟಿ ಸದ್ಯ `ಕಾಂತಾರ’ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಸದ್ದು ಮಾಡ್ತಿದ್ದಾರೆ. ಹೀಗಿರುವಾಗ ಇತ್ತೀಚಿನ ಹಿಂದಿ ಸಂದರ್ಶನವೊಂದರಲ್ಲಿ ರಶ್ಮಿಕಾ ಅಥವಾ ಸಮಂತಾ ಯಾರು ನಟಿಸಲು ಇಷ್ಟ ಎಂದು ನಿಪೂಪಕಿ, ರಿಷಬ್‌ಗೆ ಕೇಳಿದ್ದಾರೆ.ಸಮಂತಾ ಪರ್ಫಾಮೆನ್ಸ್ ನನಗೆ ತುಂಬಾ ಇಷ್ಟವಾಗುತ್ತಿದೆ. ಹೊಸ ಹೊಸ ಕಲಾವಿದರನ್ನು ಕರೆದು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇದೆ. ವಿಭಿನ್ನ ಕ್ಯಾರೆಕ್ಟರ್‌ಗಳಿರುತ್ತದೆ ಯಾವುದೇ ಬ್ಯಾಗೇಜ್ ಹೊತ್ತಿಕೊಂಡು ಬರುವುದಿಲ್ಲ ನಮಗೂ ಯಾವ ಬ್ಯಾಗೇಜ್ ಇರುವುದಿಲ್ಲ ಎಂದಿದ್ದಾರೆ. ರಶ್ಮಿಕಾ ಅಥವಾ ಸಮಂತಾ ಎಂದಾಗ ಸ್ಯಾಮ್ ಹೆಸರನ್ನ ರಿಷಬ್ ಸೂಚಿಸಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿಇನ್ನೂ `ಕಾಂತಾರ’ ಸಿನಿಮಾ ಒಟ್ಟು 350 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್ ಸಿನಿಮಾ ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿದೆ.
Sign in to your account
Username or Email Address


Password

 Remember Me


