ಶಿವಮೊಗ್ಗ: ಮೃತ ತಾಯಿಯ (Mother) ಅಂತ್ಯಕ್ರಿಯೆ (Funeral) ನೆರವೇರಿಸಿ, ಮನೆಗೆ ಬರುತ್ತಿದ್ದಂತೆ ಮಗ (Son) ಕೂಡಾ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲುಸಾಲೆ ಗ್ರಾಮದಲ್ಲಿ ಕಳೆದ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಹುಲ್ಲುಸಾಲೆ ಗ್ರಾಮದ ಚಿನ್ನಮ್ಮ (78) ಕಳೆದ ಶನಿವಾರ ವಯೋಸಹಜವಾಗಿ ಸಾವನ್ನಪ್ಪಿದ್ದರು. ತಾಯಿಯ ಅಂತ್ಯ ಸಂಸ್ಕಾರವನ್ನು ಮಗ ತಿಮ್ಮಪ್ಪಗೌಡ (58) ಭಾನುವಾರದಂದು ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದ ಅರ್ಧಗಂಟೆ ಸಮಯದಲ್ಲೇ ತಿಮ್ಮಪ್ಪಗೌಡ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕಾಲು ಜಾರಿ ತೊಡಿಕಾನ ಜಲಪಾತಕ್ಕೆ ಬಿದ್ದು ಅರಣ್ಯ ವೀಕ್ಷಕ ಸಾವುತಿಮ್ಮಪ್ಪಗೌಡ ತನ್ನ ತಾಯಿಯನ್ನು ಬಹಳ ಪ್ರೀತಿಸುತ್ತಿದ್ದು, ತಾಯಿ ಮೃತಪಟ್ಟ ನಂತರ ತೀವ್ರವಾಗಿ ನೊಂದಿದ್ದರು. ಹೀಗಾಗಿಯೇ ಹೃದಯಾಘಾತ ಆಗಿರಬಹುದು ಎನ್ನಲಾಗುತ್ತಿದೆ. ಒಂದೇ ಮನೆಯಲ್ಲಿ 2 ದಿನದ ಅಂತರದಲ್ಲಿ ತಾಯಿ ಮಗ ಮೃತಪಟ್ಟಿರುವುದು ಕುಟುಂಬಕ್ಕಷ್ಟೇ ಅಲ್ಲದೇ ಗ್ರಾಮಸ್ಥರಿಗೂ ದುಃಖ ಉಂಟುಮಾಡಿದೆ. ಇದನ್ನೂ ಓದಿ: ಕುದಿಯುತ್ತಿರುವ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು
Sign in to your account
Username or Email Address


Password

 Remember Me


