ಕೋಲಾರ: ಕೊಟ್ಟಿದ್ದ ಪಾರಿವಾಳ (Pigeon) ವಾಪಸ್ ಕೇಳಿದ್ದಕ್ಕೆ ಚಾಕುವಿನಿಂದ ಮನಬಂದಂತೆ 7 ಜನರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.ಕೋಲಾರ ಜಿಲ್ಲೆಯ ಮಾಲೂರು (Maluru) ಪಟ್ಟಣದ ಗಾಂಧಿ ಸರ್ಕಲ್‍ನಲ್ಲಿ ಈ ಘಟನೆ ನಡೆದಿದ್ದು, ಗಾಂಜಾ ಮತ್ತಿನಲ್ಲಿದ್ದ ಇಮ್ರಾನ್ ಖಾನ್ ಎಂಬಾತ 7 ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ರಾಮು ಮತ್ತು ಅವರ ಕುಟುಂಬಸ್ಥರ ಹಲ್ಲೆಗೊಳಗಾದವರಾಗಿದ್ದಾರೆ.ಪಾರಿವಾಳ ವ್ಯಾಪಾರ ಮಾಡುತ್ತಿದ್ದ ರಾಮು ಬಳಿ ಇಮ್ರಾನ್ ಖಾನ್‌ ಪಾರಿವಾಳ ತೆಗೆದುಕೊಂಡಿದ್ದ. ಪಾರಿವಾಳ ವಾಪಸ್ ನೀಡುವಂತೆ ರಾಮು ಕೇಳಿದ್ದಾನೆ. ಇದರಿಂದಾಗಿ ರೊಚ್ಚಿಗೆದ್ದ ಇಮ್ರಾನ್ ಗಾಂಜಾ ಮತ್ತಿನಲ್ಲಿ ಕಳೆದ ರಾತ್ರಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಹೋದ ರಾಮು ಸಹೋದರ ನಾಗರಾಜ್, 3 ಜನ ಮಹಿಳೆಯರಿಗೆ ಚಾಕು ಹಾಕಲಾಗಿದೆ. ಸದ್ಯ ಇಮ್ರಾನ್ ಪೊಲೀಸರು ಬಂಧಿಸಿದ್ದು, ಗಾಯಾಳುಗಳು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಯಲ್ಲಿ ರಾಮು ಸಹೋದರ ನಾಗರಾಜ್‍ಗೆ ಗಂಭೀರ ಗಾಯಗಳಾಗಿದ್ದು, ಮುಖ, ಕೈ-ಕಾಲು ಹಾಗೂ ಎದೆ ಭಾಗಕ್ಕೆ ಚಾಕು ಇರಿತವಾಗಿದೆ. ಘಟನೆಯಲ್ಲಿ ರಾಮು ಅಣ್ಣ ನಾಗರಾಜ್ ಸೇರಿದಂತೆ ಮೂವರು ಮಹಿಳೆಯರಾದ ರಾಜೇಶ್ವರಿ, ನಾಗವೇಣಿ ಹಾಗೂ ಚಂದ್ರಕಲಾ ಎಂಬುವವರಿಗೆ ಗಾಯಗಳಾಗಿವೆ. ಇದನ್ನೂ ಓದಿ: ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುತ್ತಲೇ ಮಗ ಹೃದಯಾಘಾತದಿಂದ ಸಾವುಸರ್ಕಾರಿ ಆಸ್ಪತ್ರೆಗೆ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಭೇಟಿ ನೀಡಿ ಹಲ್ಲೆಗೊಳಗಾದ ಕುಟುಂಬದ ಆರೋಗ ವಿಚಾರಿಸಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಒತ್ತಾಯ ಮಾಡಿದ್ದಾರೆ. ಇನ್ನೂ ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಜಿ20 ಲೋಗೋದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ: ಕಾಂಗ್ರೆಸ್‌ ಕಿಡಿ
Live Tv
[brid partner=56869869 player=32851 video=960834 autoplay=true]








 Advertisement 




Sign in to your account
Username or Email Address


Password

 Remember Me


