ಬಿ‌ಗ್ ಬಾಸ್ ಮನೆ(Bigg Boss Kannada) ಇದೀಗ ಹೊತ್ತಿ ಉರಿಯುತ್ತಿದೆ. ಯಾರು ಫೇಕ್, ಯಾರು ರಿಯಲ್ ಎಂಬ ಟಾಸ್ಕ್‌ನಲ್ಲಿ ಮನೆಮಂದಿಯ ನಿಜ ಸ್ವರೂಪ ಅನಾವರಣವಾಗುತ್ತಿದೆ. ಈ ವೇಳೆ ರೂಪೇಶ್ ರಾಜಣ್ಣ ದಿವ್ಯಾ ಉರುಡುಗ(Divya Uruduga) ಅವರಿಗೆ ಫೇಕ್ ಎಂದು ಕಿಡಿಕಾರಿದ್ದರು. ಇದನ್ನೆಲ್ಲ ಗಮನಿಸಿ, ರಾಜಣ್ಣಗೆ ಆರ್ಯವರ್ಧನ್ (Aryavardhan Guruji) ಪಾಠ ಮಾಡಿದ್ದಾರೆ.ಬಿಗ್ ಬಾಸ್ ಓಟಿಟಿ ಸೀಸನ್‌ನಿಂದ ಟಿವಿ ಬಿಗ್ ಬಾಸ್‌ವೆರೆಗೂ ತಮ್ಮದೇ ಶೈಲಿಯಲ್ಲಿ ಗುರೂಜಿ ಆಟವಾಡುತ್ತಿದ್ದಾರೆ. ಕೆಲವೊಮ್ಮೆ ಏನು ಗೊತ್ತಿಲ್ಲದವರಂತೆ ಇದ್ದರೂ ಗೂರೂಜಿ ಮೈಂಡ್ ಗೇಮ್‌ನಲ್ಲಿ ಮಾಸ್ಟರ್ ಆಗಿದ್ದಾರೆ. ಇದೀಗ ಮನೆಯಲ್ಲಿ ಸಿಂಪಥಿ ಗಿಟ್ಟಿಸಿಕೊಂಡು ವೋಟ್ ತೆಗೆದುಕೊಳ್ಳುತ್ತಾರೆ ಎಂಬ ವಿಷ್ಯವಾಗಿ ರಾಜಣ್ಣಗೆ (Roopesh Rajanna) ಗುರೂಜಿ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿಈ ವಾರ ಬಿಗ್ ಬಾಸ್ ಸಿಂಗಲ್ ಆಗಿ ಆಡುವ ಆಟ ಕೊಟ್ಟಿದ್ದಾರೆ. ಎಲ್ಲರಿಗೂ ಯೋಗ ಇದೆ. ಬಹುಮತ ಕೊಡೋರು ಬೇಕು ಅಷ್ಟೇ. ಗೇಮ್‌ನಲ್ಲಿ ಪ್ಲಾನ್ ಮುಖ್ಯ. ದ್ವೇಷ, ಪ್ರೀತಿ, ಕೋಪ ಯಾವುದೂ ಮುಖ್ಯ ಅಲ್ಲ. ಸಿಂಪಥಿ ವೋಟ್‌ನ ಜಾಸ್ತಿ ತೆಗೆದುಕೊಳ್ಳುವವರು ಇದ್ದಾರೆ. ಸಣ್ಣ ಪದವನ್ನ ದೊಡ್ಡದಾಗಿ ಬಳಸಿಕೊಳ್ಳುತ್ತಾರೆ. ಅದಕ್ಕೆ ಹೊಣೆಯಾಗಿ ಕಸಿವಿಸಿ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಮಾತನಾಡಿ, ಎಂದು ರೂಪೇಶ್ ರಾಜಣ್ಣ ಅವರಿಗೆ ಆರ್ಯವರ್ಧನ್ ಗುರೂಜಿ ಪಾಠ ಮಾಡಿದರು.ಸಂಬರ್ಗಿ ಕ್ಯಾಪ್ಟೆನ್ಸಿಯಲ್ಲಿ ರೂಪೇಶ್ ರಾಜಣ್ಣ ತುಂಬಾ ಅಗ್ರೆಸ್ಸಿವ್ ಆಗಿದ್ದಾರೆ. ಈ ವಾರ ಅವರು ಆಡುವ ಶೈಲಿ, ಮಾತನಾಡುವ ರೀತಿ ಇದೀಗ ಮನೆಮಂದಿಯ ತಲೆ ಕಡಿಸಿದೆ. ಇನ್ನೂ ಸಾನ್ಯ ಅಯ್ಯರ್ ನಂತರ ಯಾರು ಮನೆಯಿಂದ ಹೊರ ಬರಲಿದ್ದಾರೆ ಎಂಬುದರ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿದೆ.
Sign in to your account
Username or Email Address


Password

 Remember Me


