`ಕಾಂತಾರ’ (Kantara Film) ಚಿತ್ರದ ಓಟಕ್ಕೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದೆ. ಬಿಟೌನ್ ಅಂಗಳದಲ್ಲಿ ಅಲ್ಲಿನ ಸಿನಿಮಾಗಳಿಗೆ ಸಿಗದ ಯಶಸ್ಸು ದಕ್ಷಿಣ ಸಿನಿಮಾಗಳಿಗೆ ಸಿಗುತ್ತಿದೆ. `ಕೆಜಿಎಫ್ 2′(Kgf 2), `ಕಾಂತಾರ’ ನಂತರ ಬಾಲಿವುಡ್ ಶೇಕ್ ಆಗಿದೆ.ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ಕೊಡುತ್ತಿರುವ ಹಿಂದಿ ಚಿತ್ರರಂಗಕ್ಕೆ ದಕ್ಷಿಣದ ಸಿನಿಮಾಗಳ ಗೆಲುವು ಇದೀಗ ನುಂಗಲಾರದ ತುತ್ತಾಗಿದೆ. ಇದೀಗ ಪ್ರೇಕ್ಷಕರಿಗೂ ದಕ್ಷಿಣದ ಸಿನಿಮಾಗಳ ಕಂಟೆಂಟ್ ಇಷ್ಟವಾಗಿದೆ. ತನ್ನ ನೆಲದಲ್ಲೇ ಹಿಂದಿ ಸಿನಿಮಾಗಳಿಗೆ ನೆಲೆ ಇಲ್ಲದಂತೆ ಆಗಿದೆ. ರಿಷಬ್(Rishab Shetty) ನಟನೆಯ `ಕಾಂತಾರ’ ಚಿತ್ರದ ಸಕ್ಸಸ್ ಬಾಲಿವುಡ್ ಅನ್ನೇ ಆಳುತ್ತಿದೆ. ಇದನ್ನೂ ಓದಿ:ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್ಇತ್ತೀಚಿನ ಹೊಂಬಾಳೆ ಬ್ಯಾನರ್‌ನ(Hombale Films) `ಕೆಜಿಎಫ್ 2′ ಮತ್ತು `ಕಾಂತಾರ’ ಸಕ್ಸಸ್‌ಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ. ವರ್ಲ್ಡ್ ವೈಡ್ ಒಟ್ಟು `ಕೆಜಿಎಫ್ 2′ 1000 ಕೋಟಿ ರೂ. ಬಾಚಿದ್ರೆ, `ಕಾಂತಾರ’ 350 ಕೋಟಿ ರೂ. ಕಲೆಕ್ಷನ್ ಮಾಡಿದೆ.ಒಟ್ನಲ್ಲಿ ದಕ್ಷಿಣ ಸಿನಿಮಾಗಳಿಂದ ಬಾಲಿವುಡ್‌ಗೆ ಗಟ್ಟಿ ನೆಲೆ ಇಲ್ಲದಂತಾಗಿದೆ. ಮುಂಬರುವ ದಿನಗಳಲ್ಲಿ ಖಡಕ್ ಕಂಟೆಂಟ್ ಸಿನಿಮಾಗಳೊಂದು ಗೆದ್ದಿ ಬಿಗಿ ತೋರಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


