ಚಂದನವನದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಜಗ್ಗೇಶ್(Jaggesh), ಗುರು ಪ್ರಸಾದ್(Guru Prasad) ಜುಗಲ್ ಬಂದಿಯ `ಮಠ’ ಇದೀಗ ಮತ್ತೆ ಸೌಂಡ್ ಮಾಡುತ್ತಿದೆ. ಅದೇ ಹೆಸರಿನ ಟೈಟಲ್ ಜೊತೆ ಭಿನ್ನ ಕಂಟೆಂಟ್ ಹೊತ್ತು ರವೀಂದ್ರ ವೆಂಶಿ ಮತ್ತು ತಂಡ ಮೋಡಿ ಮಾಡಲು ರೆಡಿಯಾಗಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಲಾಂಚ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ನೀಡಿದ್ದಾರೆ.ರವೀಂದ್ರ ವೆಂಶಿ ನಿರ್ದೇಶನದಲ್ಲಿ `ಮಠ’ ಸಿನಿಮಾ ಮೂಡಿ ಬಂದಿದ್ದು, ನೈಜ ಘಟನೆ ಆಧರಿಸಿ ಈ ಚಿತ್ರ ಮಾಡಲಾಗಿದೆ. ಇನ್ನೂ ʻಮಠʼ ಚಿತ್ರದ ಟ್ರೈಲರ್ ನೋಡಿ, ಚಿತ್ರತಂಡದ ಭಿನ್ನ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ. ಇಡೀ ಚಿತ್ರತಂಡಕ್ಕೆ ದೊಡ್ಮನೆ ಸೊಸೆ ಅಶ್ವಿನಿ(Ashwini Puneeth Rajkumar) ಶುಭಹಾರೈಸಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡುಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿ, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. 300 ಮಠಗಳಲ್ಲಿ ಚಿತ್ರೀಕರಣ ಮಾಡಲಾಗಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಅಬ್ಬರಿಸಲಿದೆ.ಇನ್ನೂ ಚಿತ್ರದಲ್ಲಿ ಗುರುಪ್ರಸಾದ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಬೀರಾದರ್, ರಮೇಶ್ ಭಟ್, ಬ್ಯಾಂಕ್ ಜನಾರ್ಧನ್, ಗಿರಿ, ಮೂಗು ಸುರೇಶ್, ರಾಜು ತಾಳಿಕೋಟೆ ನಟಿಸಿದ್ದಾರೆ.
Sign in to your account
Username or Email Address


Password

 Remember Me


