ಚಿಕ್ಕಬಳ್ಳಾಪುರ: ಡಿಕ್ಷನರಿ ಮಾಡಿದ್ದು, ಆಂಗ್ಲರು ಆಂಗ್ಲರಿಗೆ ದೇಶ ಒಡೆದು ಆಳುವ ಚಿಂತೆನೆಯಿತ್ತು. ಅವರಿಗೆ ದೇಶವನ್ನ ಕೂಡಿಸಿ ಒಗ್ಗಟ್ಟಾಗಿರಲಿ ಅನ್ನುವ ಚಿಂತನೆ ಇರಲಿಲ್ಲ. ಅವರು ಸಾವಿರ ಅರ್ಥ ಕೊಡಬಹುದು. ಆದರೆ ನೀವು ಹಿಂದೂವಾಗಿ ಈ ಮಣ್ಣಲ್ಲಿ ಜನಿಸಿದವರು ಎಂದು ನಟ ಹಾಗೂ ವಿಧಾನಪರಿಷತ್ ಸದಸ್ಯ ಜಗ್ಗೇಶ್ (Jaggesh) ಹೇಳಿದರು.ಕೆಂಪೇಗೌಡ ಏರ್ ಪೋರ್ಟ್‌ (KempeGowda Airport) ಬಳಿ ಮಾತನಾಡಿದ ಅವರು, ಸರ್ವೇಜನ ಸುಖಿನೋ ಭವಂತು ಅಂತ ಹೇಳೋ ಧರ್ಮ ಯಾವುದಾದರೂ ಇದ್ರೆ ಅದು ನಮ್ಮ ಹಿಂದೂ ಧರ್ಮ. ಆದರೆ ಜಾರಕಿಹೊಳಿಯವರಿಗೆ ಏನೂ ಗೊತ್ತಿಲ್ಲ. ಯಾಕಂದ್ರೆ ಅವರು ವಾಮಾಚಾರ ಫ್ಯಾಮಿಲಿಯವರು ಸ್ಮಶಾನ ಪ್ರೀತಿಸುವವರು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ಸೇ ಅಶ್ಲೀಲ- ಜಾರಕಿಹೊಳಿ ವಿರುದ್ಧ ಆರಗ ಜ್ಞಾನೇಂದ್ರ ಕಿಡಿಸ್ಮಶಾನವನ್ನ ಪ್ರೀತಿಸುವವರು ಯಾರು ಅಂದ್ರೆ ಅವರು ನಮ್ಮ ಸಂಸ್ಕೃತಿಯನ್ನ ಒಪ್ಪದೆ ಇರುವವರು. ಮಾಠಮಂತ್ರ ಮಾಯಾಜಾಲ ಮಾಡುವಂತವರು. ಅವರ ಸಂಖ್ಯೆ ಶೇ.1% ಅವರು ಇಂತವರ ಹೇಳಿಕೆಗಳನ್ನ ನಿಜವಾಗ್ಲೂ ಹಿಂದೂ (Hindu) ಅನ್ನೋ ಹೆಮ್ಮೆಯನ್ನಿಟ್ಟುಕೊಂಡಿರೋ ಹಿಂದೂಗಳು ಕ್ಷಮಿಸಲ್ಲ ಎಂದು ಕಿಡಿಕಾರಿದರು.ಮಸಲ್ಮಾನರು ಅವರ ಧರ್ಮದ ವಿರುದ್ಧ ಮಾತನಾಡಿದ್ರೆ ಕೂಡಲೇ ಅವರ ಪರಿಣಾಮ ತುಂಬಾ ವಿಕೃತವಾಗಿರುತ್ತೆ. ಆದರೆ ನಮ್ಮ ಹಿಂದೂಗಳು ಶಾಂತಿಪ್ರಿಯರು ಕ್ಷಮಾಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಅಂತ ಪದೇ ಪದೇ ಈ ರೀತಿ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತ್ರು ಅಂದ್ರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆ ಅಂತ ಜಗ್ಗೇಶ್ ಹೇಳಿದರು.
Sign in to your account
Username or Email Address


Password

 Remember Me


