ಮಂಗಳೂರು: ಬಿಜೆಪಿಯವರು (BJP) ಜನ ಸಂಕಲ್ಪ ಯಾತ್ರೆ ನಡೆಸುತ್ತಿಲ್ಲ, ಬದಲಿಗೆ ಅದು ಜನರ ಸಂಕಷ್ಟದ ಯಾತ್ರೆಯಾಗಿದೆ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ (UT Khader) ವ್ಯಂಗ್ಯವಾಡಿದರು.ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಟೀಕಿಸಿದರು. ಜನಸಾಮಾನ್ಯರ ಮನಸ್ಸು ಬೇರೆಡೆ ಸೆಳೆಯಲು ಈ ಯಾತ್ರೆ ಮಾಡಲಾಗುತ್ತಿದೆ. ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಸರ್ಕಾರ ಮಾಡಿದೆ ಎಂದು ಕಿಡಿಕಾರಿದ ಅವರು, ಡಬ್ಬಲ್ ಇಂಜಿನ್ ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚುವ ತಾಕತ್ತು ಇಲ್ಲ. ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಇಂಜಿನ್ ಕೆಟ್ಟು ಹೋಗಿದ್ದು, ಇಂಜಿನ್ ಇಲ್ಲದೇ ಬರೇ ಸೈಲೆನ್ಸರ್ ಮಾತ್ರ ಸದ್ದು ಮಾಡುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕೋಲಾರದ JDS ಮುಖಂಡ ಸುಹೆಲ್ ದಿಲ್ ನವಾಜ್ AAP ಸೇರ್ಪಡೆವಾರ್ಷಿಕ ಮುಂಗಡ ಪತ್ರದಲ್ಲಿ ಹೇಳಿದ ಭರವಸೆ ಈಡೇರಿಸಿಲ್ಲ, ಮಿನುಗಾರರಿಗೆ ಬಿಜೆಪಿ ಮೋಸ ಮಾಡಿದಷ್ಟು ಬೇರೆ ಯಾರು ಮಾಡಿಲ್ಲ, ಮೀನುಗಾರರ ಮುಗ್ಧತೆಯನ್ನು ಬಿಜೆಪಿ ದುರುಪಯೋಗ ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅವರು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡ್ತಿರೋದು ನೀಚ ಕೆಲಸ – ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ
Sign in to your account
Username or Email Address


Password

 Remember Me


