ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರಿಗೆ ಚಾಕು ಇರಿದಿರುವ ಘಟನೆ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.ಬೆಳಗಾವಿ (Belgavi) ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ (Ashraya Colony) ಮಂಗಳವಾರ ಸಂಜೆ ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಪ್ರಶ್ನಿಸಲು ಹಿರಿಯರ ಸಮೇತ ಬಾಲಕಿಯ ತಂದೆ ಹೋಗಿದ್ದರು. ಈ ವೇಳೆ 17 ವರ್ಷದ ಬಾಲಕ ಹಾಗೂ ಆತನ ಸ್ನೇಹಿತರು, ಬುದ್ದಿ ಹೇಳಲು ಹೋಗಿದ್ದ ನಾಲ್ವರ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದಾರೆ. ಇದನ್ನೂ ಓದಿ: ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ – ಧರ್ಮಸ್ಥಳ ಸಂಘದ ಕಾರ್ಯಕ್ಕೆ ಭಾರೀ ಮೆಚ್ಚುಗೆಬಾಲಕ ಮತ್ತು ಬಾಲಕಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಆರೋಪಿ ಕಡೆಯ ಓರ್ವ ವ್ಯಕ್ತಿಗೂ ಗಾಯವಾಗಿದೆ. ರಫೀಕ್ ಕುರಿಕೊಪ್ಪ, ಸಾಹಿದ್ ಸೌದಾಗರ್, ಅತಾಹುಲ್ಲಾ ಹುಬ್ಬಳ್ಳಿ, ಮೆಹಬೂಬ್ ಹುಬ್ಬಳ್ಳಿ ಚಾಕು ಇರಿತಕ್ಕೊಳಗಾದವರಾಗಿದ್ದಾರೆ. ಜಗಳ ಬಿಡಿಸಲು ಹೋದ ರವಿ ತಿಮ್ಮನ್ನರ್ ಅವರ ಮೇಲೂ ಕೂಡ ಹಲ್ಲೆ ನಡೆಸಲಾಗಿದೆ.ಗಾಯಗಳುಗಳಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆ ಬಳಿ ಓರ್ವ ಎಸಿಪಿ, ಇಬ್ಬರು ಸಿಪಿಐ ಸೇರಿ ಇಪ್ಪತ್ತಕ್ಕೂ ಹೆಚ್ಚು ಜನ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು
Sign in to your account
Username or Email Address


Password

 Remember Me


