ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ `ಗಾಳಿಪಟ’ (Galipata) ಚಿತ್ರದ ನಟಿ ಭಾವನಾ ರಾವ್ (Bhavana Rao) ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಿಟೌನ್‌ನಲ್ಲಿ ಪವರ್‌ಫುಲ್ ಪಾತ್ರದ ಮೂಲಕ ನಟಿ ಲಗ್ಗೆ ಇಡುತ್ತಿದ್ದಾರೆ.`ಗಾಳಿಪಟ’ ಖ್ಯಾತಿಯ ಭಾವನಾ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. `ಧಾರಾವಿ ಬ್ಯಾಂಕ್'(Dharavi Bank) ಎಂಬ ಮುಂಬೈ ಕ್ರೈಮ್ ಲೋಕದ ಕಥೆಯಲ್ಲಿ ಭಾವನಾ ಬಣ್ಣಹಚ್ಚಿದ್ದಾರೆ. ಓಟಿಟಿಗಾಗಿಯೇ ಹೊಸ ಚಿತ್ರವೊಂದು ಮಾಡುತ್ತಿದ್ದು, ಸುನೀಲ್ ಶೆಟ್ಟಿ(Sunil Shetty) ಮತ್ತು ವಿವೇಕ್ ಓಬೆರಾಯ್ (Vivek Oberoi) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುನೀಲ್‌ ಶೆಟ್ಟಿ ಮುಂದೆ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ವಿವೇಕ್‌ ಅಬ್ಬರಿಸಲಿದ್ದಾರೆ. ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್ಇನ್ನೂ ಸುನೀಲ್ ಶೆಟ್ಟಿ ಮಗಳ ಪಾತ್ರದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಧಾರಾವಿ ಬ್ಯಾಂಕ್ ಚಿತ್ರದ ಮೂಲಕ ಬಿಟೌನ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
Sign in to your account
Username or Email Address


Password

 Remember Me


