ಬೆಂಗಳೂರು: ವಿದ್ಯಾರ್ಥಿಯೊಬ್ಬ (Student) ಅಪಾರ್ಟ್ಮೆಂಟ್‌ನ ಹದಿನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.ಬೆಂಗಳೂರಿನ ನಾಗವಾರ ಬಳಿಯ ಆರ್ ಆರ್ ಸಿಗ್ನೇಚರ್ ಅಪಾರ್ಟ್ಮೆಂಟ್‌ನಲ್ಲಿ (Apartment) ಮೋಹಿನ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಮಹಮ್ಮದ್ ನೂರ್, ನೋಹೇರಾ ದಂಪತಿಯ ಒಬ್ಬನೇ ಮಗನಾಗಿದ್ದ. ಅಷ್ಟೇ ಅಲ್ಲದೇ ಮೋಹಿನ್ ಖಾಸಗಿ ಸ್ಕೂಲ್‍ನಲ್ಲಿ (School) ಎಸ್‍ಎಸ್‍ಎಲ್‍ಸಿ ಓದುತ್ತಿದ್ದ.ಆದರೆ ಇಂದು ಪರೀಕ್ಷೆ (Exam) ನಡೆಯುತ್ತಿದ್ದ ವೇಳೆ ಕಾಪಿ ಹೊಡೆಯುತ್ತಿದ್ದ ಮೋಹಿನ್ ಅನ್ನು ಕಂಡ ಶಿಕ್ಷಕರು ತರಗತಿಯಿಂದ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಸ್ಕೂಲ್‍ನಿಂದ ಮೋಹಿನ್ ಹೊರಬಂದಿದ್ದನು. ಘಟನೆಯಿಂದ ಮನನೊಂದ ಮೋಹಿನ್ ಸಂಜೆ ಐದು ಗಂಟೆ ವೇಳೆಗೆ ಸಿಗ್ನೇಚರ್ ಅಪಾರ್ಟ್ಮೆಂಟ್‌ನ ಹದಿನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬಿಜೆಪಿಯದ್ದು ಜನ ಸಂಕಲ್ಪ ಯಾತ್ರೆ ಅಲ್ಲ, ಅದು ಜನರ ಸಂಕಷ್ಟದ ಯಾತ್ರೆ : ಯು.ಟಿ.ಖಾದರ್ಆದರೆ ಮೋಹಿನ್ ಮನೆಯಿರುವುದು ಅಪಾರ್ಟ್ಮೆಂಟ್‌ ಮುಂಭಾಗದ ರಸ್ತೆಯ ಬದಿಯಲ್ಲಾಗಿದೆ. ಅಪಾರ್ಟ್ಮೆಂಟ್‌ಗೆ ಅಪರಿಚಿತ ಎಂಟ್ರಿ ಇಲ್ಲ, ಆದ್ರೂ ಹೇಗೆ ಅಪಾರ್ಟ್ಮೆಂಟ್‌ನ ಟೆರೇಸ್‍ಗೆ ಮೋಹಿನ್ ಹೋದ ಎಂಬುದರ ಬಗ್ಗೆ ಇದೀಗ ಪ್ರಶ್ನೆ ಕಾಡುತ್ತಿದ್ದು, ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಮೋಹಿನ್ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ:  ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಮುಖಂಡ ಹೃದಯಾಘಾತದಿಂದ ನಿಧನ
Sign in to your account
Username or Email Address


Password

 Remember Me


