ಡಿವೋರ್ಸ್ ಪಡೆದು ಒಂದು ವರ್ಷವಾದರೂ ಕೂಡ ಸದಾ ಸುದ್ದಿಯಲ್ಲಿರುವ ನಟಿ ಸಮಂತಾ (Samantha), ಸದ್ಯ `ಯಶೋದಾ’ (Yashoda Film) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಸಮಂತಾಗೆ ಆರೋಗ್ಯದ ಬಗ್ಗೆ ನಿರೂಪಕಿ ಪ್ರಶ್ನೆ ಕೇಳಿದಾಗ ನಾನಿನ್ನೂ ಸತ್ತಿಲ್ಲ ಎಂದು ಸಮಂತಾ ಕಣ್ಣೀರಿಟ್ಟಿದ್ದಾರೆ.ನಾಗಚೈತನ್ಯರಿಂದ(Nagachaitanya) ಡಿವೋರ್ಸ್ ಪಡೆದ ಮೇಲೆ ಸಮಂತಾ ವೃತ್ತಿರಂಗದಲ್ಲಿ ಮಿಂಚುತ್ತಿದ್ದರು, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಸಂದರ್ಶನದಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.`ಯಶೋದಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅನಾರೋಗ್ಯದ ನಡುವೆಯೂ ಸಮಂತಾ ಭಾಗಿದ್ದಾರೆ. ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದೆ. ನಾನಿನ್ನೂ ಸತ್ತಿಲ್ಲ ಎಂದು ತನ್ನ ಭಾವನೆಗಳನ್ನು ನಿಯಂತ್ರಿಸಲಾಗದೇ ಕಣ್ಣೀರಿಟ್ಟಿದ್ದಾರೆ.ಇದನ್ನೂ  ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿಇನ್ನೂ ಸಮಂತಾ ನಟನೆಯ ಬಹುನಿರೀಕ್ಷಿತ ಸಿನಿಮಾ ಯಶೋದಾ ನವೆಂಬರ್ 11ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಬಾಡಿಗೆ ತಾಯ್ತನದ ಆಧರಿಸಿದ ಕಥೆಯ ಮೂಲಕ ಯಶೋದಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
Sign in to your account
Username or Email Address


Password

 Remember Me


