ಬೆಂಗಳೂರು: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? ಪದವಿ ಮುಗಿದ ನಂತರ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಇದೆ? ಈ ಕೋರ್ಸ್‍ಗಳಿಗೆ ಎಷ್ಟು ಶುಲ್ಕ ಇರುತ್ತದೆ? ಈ ಕಾಲೇಜುಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ಯಾ? ಈ ರೀತಿಯ ಪ್ರಶ್ನೆಗಳು ಪೋಷಕರಿಗೆ, ವಿದ್ಯಾರ್ಥಿಗಳಿಗೆ ಬರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ ‘ವಿದ್ಯಾ ಮಂದಿರ’ದಲ್ಲಿ ಸುಲಭವಾಗಿ ಉತ್ತರ ಸಿಗಲಿದೆ.ಪಬ್ಲಿಕ್ ಟಿವಿ (Public TV) ಎರಡು ದಿನ `ವಿದ್ಯಾಮಂದಿರ’ದ ಹೆಸರಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವವನ್ನು ಆಯೋಜಿಸಿದೆ. ಈ ಹಿಂದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಬೆಂಗಳೂರಿನ (Bengaluru) ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ. 12, 13 ರಂದು ಪದವಿ ವಿದ್ಯಾರ್ಥಿಗಳಿಗಾಗಿ ವಿದ್ಯಾ ಮಂದಿರ (Vidya Mandira) ನಡೆಯುಲಿದೆ.ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯಮಿಕ ಕೋರ್ಸ್‍ಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.ಯಾರೆಲ್ಲ ಆಗಮಿಸಬಹುದು?:
ಕೌನ್ಸೆಲರ್‌ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.ದಿನಾಂಕ: ನವೆಂಬರ್ 12 ಮತ್ತು 13
ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ, ಮಲ್ಲೇಶ್ವರಂ, ಬೆಂಗಳೂರು
ಸಮಯ: ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ
Sign in to your account
Username or Email Address


Password

 Remember Me


