ಸೌತ್ ಬ್ಯೂಟಿ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಯೋಸಿಟಿಸ್ ಕಾಯಿಲೆಯಿಂದ ನಟಿ ಬಳಲುತ್ತಿದ್ದಾರೆ. ಇದರ ನಡುವೆಯೂ ಕೂಡ ʻಯಶೋದಾʼ ಚಿತ್ರದ ಪ್ರಮೋಷನ್ ಕಾರ್ಯಕ್ಕೆ ಸಮಂತಾ ನೀಡುತ್ತಿದ್ದಾರೆ.`ಪುಷ್ಪ’ ಬ್ಯೂಟಿ ಸಮಂತಾ ನಟನೆಯ `ಯಶೋದಾ’ ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು, ಅನಾರೋಗ್ಯದ ನಡುವೆಯೂ ಪ್ರಚಾರ ಕಾರ್ಯಕ್ಕೆ ಸಮಂತಾ ಭಾಗವಹಿಸುತ್ತಿದ್ದಾರೆ.  ಇದೀಗ ಪ್ರಚಾರ ಕಾರ್ಯಕ್ಕೆ ಸಜ್ಜಾಗಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಇದನ್ನೂ ಓದಿ:ಇಂಡೋನೇಷ್ಯಾದಲ್ಲೂ ಕನ್ನಡದ `ಕಾಂತಾರ’ ಹೌಸ್‌ಫುಲ್ ಪ್ರದರ್ಶನಚಿತ್ರದ ಪೋಸ್ಟರ್ ಲುಕ್, ಟೀಸರ್ ಮೂಲಕ ಸಮಂತಾ ಚಿತ್ರದ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಇದೇ ನವೆಂಬರ್ 11ಕ್ಕೆ ಯಶೋದಾ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಹಾಗಾಗಿ ಮತ್ತೆ ಸಮಂತಾ ಕೆಲಸಕ್ಕೆ ಮರಳಿದ್ದಾರೆ. ಸಿನಿಮಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.  A post shared by Samantha (@samantharuthprabhuoffl)ʻಪುಷ್ಪʼ ಚಿತ್ರದ ಹಾಡಿನ ಸಕ್ಸಸ್ ನಂತರ ಯಶೋದಾ ಆಗಿ ತೆರೆಗೆ ಅಬ್ಬರಿಸಲಿರುವ ಸಮಂತಾ, ಚಿತ್ರಮಂದಿರದಲ್ಲಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


