ಹುಬ್ಬಳ್ಳಿ: ನಗರದಲ್ಲಿ (Hubballi) ರೌಡಿ ಕಾರ್ಪೊರೇಟರ್ ಮತ್ತೆ ಬಾಲಬಿಚ್ಚಿದ್ದು, ರಾತ್ರಿ ವೇಳೆ ಪಬ್‍ನಲ್ಲಿ ಗಲಾಟೆ ಮಾಡಿ ಅಂದರ್ ಆಗಿದ್ದಾನೆ.ರಾತ್ರಿ ವೇಳೆ ಪಬ್‍ವೊಂದರಲ್ಲಿ ಇಬ್ಬರ ಮೇಲೆ ಕಾರ್ಪೊರೇಟರ್ ಚೇತನ್ ಆ್ಯಂಡ್ ಗ್ಯಾಂಗ್ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪದಡಿ ಪಾಲಿಕೆ ಸದಸ್ಯ ಮತ್ತು ಆತನ ಸ್ನೇಹಿತರನ್ನು ಗೋಕುಲ್ ಠಾಣೆಯ (Gokul Police Staton)) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧಿಸದಿದ್ರೆ ಹೆಣ್ಮಕ್ಕಳು ಧರಣಿಗೆ ಕೂರ್ತಿವಿ ಅಂದಿದ್ದಾರೆ: ಸಿದ್ದರಾಮಯ್ಯಯುವತಿ ವಿಚಾರಕ್ಕೆ ರಾಹುಲ್ ಮತ್ತು ಚೇತನ್ ನಡುವೆ ಹಿರೇಕೆರೂರು ಗೋಕುಲ್ ರಸ್ತೆಯ ಐಸ್ ಕ್ಯೂಬ್ ಪಬ್‍ನಲ್ಲಿ ಗಲಾಟೆಯಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಪಾಲಿಕೆ ಸದಸ್ಯ ಚೇತನ್, ರಾಹುಲ್ ತಲೆಗೆ ಮದ್ಯದ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಗೋಕುಲ್ ರೋಡ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾರ್ಪೊರೇಟ್ ಚೇತನ್ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ದೆಹಲಿ ರೇಪ್ ಕೇಸ್ – ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಖುಲಾಸೆಗೊಳಿಸಿದ ಸುಪ್ರೀಂ
Sign in to your account
Username or Email Address


Password

 Remember Me


