ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ (Mantralaya) ಕಾರ್ತಿಕ ಮಾಸ ಹಿನ್ನೆಲೆ ತುಂಗಾರತಿ ಸಂಭ್ರಮ ಕಳೆಗಟ್ಟಿದ್ದು, ತುಂಗಭದ್ರಾ ನದಿಯಲ್ಲಿ ಕಾರ್ತಿಕ ದೀಪೋತ್ಸವ ನೆರವೇರಿಸಲಾಯಿತು.ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Mutt) ದೀಪಗಳ ಉತ್ಸವವೇ ನಡೆಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು (Subudhendra Teertha Swamiji) ತುಂಗಾಪೂಜೆ ಮಾಡಿದರು. ಶ್ರೀಗಳಿಂದ ಗುರುರಾಜರಿಗೆ ಹಾಗೂ ಶ್ರೀನಿವಾಸರಾಯರಿಗೆ ತೆಪ್ಪೋತ್ಸವ ನಡೆಯಿತು. ತುಂಗಭದ್ರಾ ನದಿಯಲ್ಲಿ ದೀಪಗಳನ್ನು ತೇಲಿಬಿಟ್ಟು ಭಕ್ತರು ಸಂಭ್ರಮಿಸಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಕಾರ್ತಿಕ ಮಾಸಾಚರಣೆ – ವಿಶೇಷ ವನಭೋಜನತುಂಗಾರತಿ ಹಿನ್ನೆಲೆ ಮಠದ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನವೆಂಬರ್ 8 ಮಂಗಳವಾರ ಕಾರ್ತಿಕ ಪೌರ್ಣಿಮಾ ದಿನ ನಡೆಯಬೇಕಿದ್ದ ತುಂಗಾ ಆರತಿ ಕಾರ್ಯಕ್ರಮವನ್ನು ಚಂದ್ರಗ್ರಹಣ ಇರುವುದರಿಂದ ಭಾನುವಾರ ಮಂತ್ರಾಲಯದಲ್ಲಿ ಆಚರಿಸಲಾಯಿತು. ಇದನ್ನೂ ಓದಿ: ವೀರಶೈವ, ಲಿಂಗಾಯತ ಎರಡೂ ಒಂದೇ: ಬಿದರಿ ಸ್ಪಷ್ಟನೆLive Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


