ಕಲಬುರಗಿ: ಕೊನೆಯ ಕ್ಷಣದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪರೀಕ್ಷಾ ಕೇಂದ್ರ ಬದಲಾವಣೆಯಿಂದಾಗಿ ಅಭ್ಯರ್ಥಿಗಳು(Candidates) ಸಂಕಷ್ಟಕ್ಕೆ ಸಿಲುಕಿ, ಪರದಾಡಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.ಅಭ್ಯರ್ಥಿಗಳ ಹಾಲ್ ಟಿಕೆಟ್‌ನಲ್ಲಿ ಪರೀಕ್ಷಾ ಕೇಂದ್ರವಾಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಜೀವನ್ ಪ್ರಕಾಶ್ ಶಾಲೆಯ ಹೆಸರು ಇದೆ. ಈ ಸ್ಥಳಕ್ಕೆ ಬಂದು ಪರೀಕ್ಷಾ ಕೇಂದ್ರದ ಹುಡುಕಾಟ ನಡೆಸಿದಾಗ ಜೀವನಪ್ರಕಾಶ್ ಶಾಲೆಯ ಪರೀಕ್ಷಾ ಕೇಂದ್ರ ಬದಲಾಗಿರುವುದು ಗೊತ್ತಾಗಿದೆ. ಅದನ್ನು ಕಂಡು ಅಭ್ಯರ್ಥಿಗಳು ಶಾಕ್ ಆಗಿದ್ದಾರೆ. ಬೇರೆ ಪರೀಕ್ಷಾ ಕೇಂದ್ರ ಹುಡುಕಾಟಕ್ಕೆ ಪರದಾಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ಅಭ್ಯರ್ಥಿ ಪರೀಕ್ಷೆಯಿಂದ ವಂಚಿತಪರೀಕ್ಷಾ ಕೇಂದ್ರ ಬದಲಾವಣೆ ಮಾಡಿರುವುದಕ್ಕೆ ಶಿಕ್ಷಣ ಇಲಾಖೆ, ಕಲಬುರಗಿ ಜಿಲ್ಲಾಡಳಿತದ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sign in to your account
Username or Email Address


Password

 Remember Me


