ಕೋಲಾರ: ಆಡಿ ಕಾರೊಂದು (Audi Car) ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾದ ಪರಿಣಾಮ ಮೂವರು ವಿದ್ಯಾರ್ಥಿಗಳು (Students) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಬಚಾವಾದ ಘಟನೆ ಕೋಲಾರ (Kolar) ಹೊರವಲಯದಲ್ಲಿ ನಡೆದಿದೆ.ಬಂಗಾರಪೇಟೆ (Bangarpet) ಮುಖ್ಯರಸ್ತೆ ಸಹಕಾರ ನಗರದಲ್ಲಿ ಘಟನೆ ನಡೆದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ. ಮೃತರು ಪ್ರಸಿದ್ಧ ಯೂನಿವರ್ಸಿಟಿವೊಂದರ ವಿದ್ಯಾರ್ಥಿಗಳು. ಬಂಗಾರಪೇಟೆಯ ಸಾಯಿ ಗಗನ್ ಘಟನೆಯಲ್ಲಿ ಪಾರಾಗಿದ್ದಾನೆ. ವಿದ್ಯಾರ್ಥಿಗಳು ಸಾಯಿ ಗಗನ್ ಮನೆಗೆ ಬಂದಿದ್ದರು. ಅಲ್ಲಿಂದ ವಾಪಸ್ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 Advertisement 




Sign in to your account
Username or Email Address


Password

 Remember Me


