ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನಲ್ಲಿ(Bigg Boss House) ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ (Roopesh Rajanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಜಗಳ ಆಡುತ್ತಲೇ ಇರುತ್ತಾರೆ. ಈ ಕಿರಿಕ್ ದೊಡ್ಮನೆಯಲ್ಲಿ ತಾರಕಕ್ಕೇರಿದ್ದು ಇದೆ. ಈ ಮಾತಿನ ಚಕಮಕಿಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಸಂಬರ್ಗಿ ಅವಮಾನ ಮಾಡಿದ್ದಾರೆ. ಈ ವಿಷ್ಯವಾಗಿ ಸಂಬರ್ಗಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಬಿಗ್ ಬಾಸ್‌ನಲ್ಲಿ ಕಿರಿಕ್ ಜೋಡಿ ಎಂದೇ ರೂಪೇಶ್ ರಾಜಣ್ಣ ಮತ್ತು ಸಂಬರ್ಗಿ ಹೈಲೈಟ್ ಆಗಿದ್ದಾರೆ. ರೂಪೇಶ್ ರಾಜಣ್ಣನ ಮೇಲೆ ಮಾತಿನ ಭರದಲ್ಲಿ ಪ್ರಶಾಂತ್ ಸಂಬರ್ಗಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ರಾಜಣ್ಣ ಅವರನ್ನು ರೋಲ್ ಕಾಲ್ ಗಿರಾಕಿ, ಈ ಮನೆಯಲ್ಲಿ ಕನ್ನಡ ಹೋರಾಟಗಾರನ್ನು ಬಾಯಿ ಮುಚ್ಚಿಸಿದ್ದೇನೆ ಎಂದು ಪ್ರಶಾಂತ್(Prashanth Sambargi) ರಾಂಗ್ ಆಗಿದ್ದರು. ಸಂಬರ್ಗಿ ಈ ನಡೆಗೆ ಬಿಗ್ ಬಾಸ್(Bigg Boss) ಮನೆಯಿಂದ ಹೊರ ಹಾಕಿ ಎಂದು ಕನ್ನಡ ಪರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ:ಸಾನ್ಯ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್: ಪುಟ್ಟಗೌರಿ ಔಟ್ಬಳಿಕ ಬಿಗ್ ಬಾಸ್ ಆದೇಶದ ನಂತರ ಕನ್ನಡ ಹೋರಾಟಗಾರರಿಗೆ ನೋವಾಗಿದ್ರೆ ಕ್ಷಮಿಸಿ. ನನ್ನ, ರಾಜಣ್ಣನ ಮೈಂಡ್ ಗೇಮ್ ಅದು. ನನ್ನ ಪ್ರೀತಿಯ ಕನ್ನಡಿಗರಿಗೆ ನೋವಾಗಿದ್ರೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ರಭಸದಿಂದ ಬಂದ ಮಾತು, ವಿರುದ್ಧವಾಗಿರಬಹುದು. ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ನನ್ನಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ್ದರು. ಇದಾದ ಬಳಿಕ ವಾರದ ಪಂಚಾಯಿತಿಯಲ್ಲಿ ಸಂಬರ್ಗಿಗೆ ಸುದೀಪ್(Kiccha sudeep) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಮಾತನಾಡುವ ಬರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನ ಮಾಡಿದ್ದೀರಿ. ನೀವು, ರಾಜಣ್ಣ ವೈಯಕ್ತಿಕವಾಗಿ ಎಷ್ಟಾದ್ರೂ ಜಗಳ ಮಾಡಿ. ಅದು ತಪ್ಪಲ್ಲ. ಯಾರೂ ಬೇಡ ಅನ್ನಲ್ಲ. ಆದ್ರೆ ಮಿತಿ ಮೀರಿ ಅದು ಕನ್ನಡ ಪರ ಹೋರಾಡುವವರಿಗೆ ನೋವಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ವಾರ್ನಿಂಗ್ ಸುದೀಪ್ ನೀಡಿದ್ದಾರೆ.
Sign in to your account
Username or Email Address


Password

 Remember Me


