ಬೆಂಗಳೂರು: ನಾಗೇಶ್‌ಗೆ(Nagesh) ದೇವರೇ ಶಿಕ್ಷೆ ಕೊಟ್ಟಿದ್ದಾನೆ. ಆತನಿಗೆ ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು. ಆತನ ಮೈಯೆಲ್ಲ ಕೊಳೆತು ಹೋಗಬೇಕು ಎಂದು ಆ್ಯಸಿಡ್ ದಾಳಿಯ ಸಂತ್ರಸ್ತೆ ಪ್ರತಿಕ್ರಿಯಿಸಿದ್ದಾರೆ.ಆ್ಯಸಿಡ್(Acid) ದಾಳಿಕೋರ ನಾಗೇಶ್‌ಗೆ ಗ್ಯಾಂಗ್ರಿನ್(Gangrene) ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ವಿಚಾರ ಕೇಳಿ ತುಂಬ ಖಷಿ ಆಗುತ್ತಿದೆ. ಯಾವ ಹುಡುಗಿಯರಿಗೂ ಹೀಗೆ ಆಗಬಾರದು. ಆಸ್ಪತ್ರೆಯಲ್ಲಿ ಮೂರು ತಿಂಗಳು ನೋವಿನಲ್ಲಿದ್ದೆ. ಇವತ್ತು ವಿಚಾರ ಗೊತ್ತಾಗಿ ಖಷಿಯಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿರುವ ನಾಗನಿಗೆ ಗ್ಯಾಂಗ್ರಿನ್
ಆತನ ಮೈಯೆಲ್ಲ ಕೊಳೆತು ಹೋಗಬೇಕು, ನೋವು ಗೊತ್ತಾಗಬೇಕು. ಬರೀ ಒಂದು ಕಾಲಲ್ಲ, ಇನ್ನು ಜಾಸ್ತಿ ಅವನು ನರಳಾಡಬೇಕು. ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ನನಗೆ ದೇವರ ಮೇಲೆ ನಂಬಿಕೆ ಇದೆ. ದೇವರೇ ಶಿಕ್ಷೆ ನೀಡಿದ್ದಾನೆ. ನನ್ನ ಮೈಯೆಲ್ಲ ಗಾಯವಾದರೂ ಎದ್ದು ಬಂದಿದ್ದೇನೆ ಎಂದು ತಿಳಿಸಿದರು.
Sign in to your account
Username or Email Address


Password

 Remember Me


